ಕಲಘಟಗಿ:ತಾಲೂಕಿನ ಮಡ್ಕಿಹೊನ್ನಳ್ಳಿ ಗ್ರಾಮದ ಆಶ್ರಯ ಪ್ಲಾಟ್ ನಲ್ಲಿರುವ ನೀರು ಸಂಗ್ರಹಣಾ ಟ್ಯಾಂಕ್ ಹಲವು ವರ್ಷಗಳಿಂದ ಬಳಕೆ ಮಾಡದೆ ಬಿಡಲಾಗಿದ್ದು,ಸರಕಾರದ ಅನುದಾನ ವ್ಯರ್ಥವಾಗಿದೆ.
ನೂತನ ಗ್ರಾಮ ಪಂಚಾಯತಿ ಕಟ್ಟಡದ ಹಿಂದುಗಡೆ ಟ್ಯಾಂಕ್ ಕಟ್ಟಲಾಗಿದೆ.ಸುಮಾರು ಎಂಟು ವರ್ಷಗಳಿಂದ ಟ್ಯಾಂಕ್ ಬಳಕೆಯಾಗದೆ ಹಾಗೆ ಬಿಡಲಾಗಿದ್ದು,ಸರಕಾರದ ಅನುದಾನ ವ್ಯರ್ಥವಾಗಿದೆ.ಗ್ರಾಮದ ನೀರು ಪೂರೈಕೆಗೆ ಬಳಕೆಯಾಗ ಬೇಕಾದ ಟ್ಯಾಂಕ್ ನಿರುಪಯುಕ್ತವಾಗಿದೆ.
ಹಾಗಾದರೇ ಸರಕಾರದ ಅನುದಾನ ಬಳಕೆ ಮಾಡಲು ಮಾತ್ರ ಟ್ಯಾಂಕ್ ಕಟ್ಟಲಾಯಿತೆ ಎಂಬ ಅನುಮಾನ ಗ್ರಾಮಸ್ಥಾರದ್ದಾಗಿದೆ.ಇನ್ನಾದರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಟ್ಯಾಂಕ್ ನ್ನು ನೀರು ಸಂಗ್ರಹಣೆ ಮಾಡಲು ಬಳಕೆ ಮಾಡ ಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Kshetra Samachara
11/11/2020 07:19 pm