ಕುಂದಗೋಳ : ಈ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಗೆ ಟೋಲ್ ಯಾವಾಗ ಆಯ್ತು ಅವಾಗಿಂದ ಜನ್ರು ಹುಬ್ಬಳ್ಳಿಗೆ ಸಂಪರ್ಕ ಮಾಡೋ ಈ ಅಲ್ಲಾಪುರ ಹಳ್ಯಾಳದ ಒಳ ರಸ್ತೆಗೆ ಹೊಂದಿಕೊಂಡು ಬಿಟ್ಟಾರ ನೋಡ್ರಿ ಈ ಪರಿಣಾಮ ರಸ್ತೆ ಅನ್ನೋದ ಕಲ್ಲುಗಳ ರಾಶಿ ತುಂಬಿ ಹಾಳಾಗಿ ಹೋಗಿದೆ.
ಕುಂದಗೋಳ ಪಟ್ಟಣದಿಂದ ಕಡಪಟ್ಟಿ, ಅಲ್ಲಾಪುರದ ಮೂಲಕ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇತ್ತಿಚೆಗೆ ಖಾಸಗಿ ವಾಹನಗಳ ಓಡಾಟ ಹೆಚ್ಚಾಗಿದೆ ಕಾರಣ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಗೆ ಟೋಲ್ ಅಳವಡಿಸಿದ್ದು ಟೋಲ್ ಗೆ ಹಣ ಪಾವತಿಸುವ ಬದಲಾಗಿ ವಾಹನಗಳು ಈ ಕಲ್ಲು, ತಗ್ಗು, ಮಣ್ಣು ತುಂಬಿ ಹಾಳಾದ ಒಳದಾರಿ ಹಿಡಿದಿದ್ದು ರಸ್ತೆ ಮತ್ತಷ್ಟು ಅವ್ಯವಸ್ಥೆಯ ಹಾದಿ ತಲುಪಿದೆ.
ಈ ಬಗ್ಗೆ ನಿತ್ಯ ತಾಲೂಕು ಕಚೇರಿ, ತಾಲೂಕು ಹೆರಿಗೆ ಆಸ್ಪತ್ರೆ, ಹೊಲಕ್ಕೆ ಹೋಗೊ ಸಾರ್ವಜನಿಕರು ರೈತರಿಗೆ ಸಮಸ್ಯೆ ಉಂಟಾಗಿದ್ದು ರಸ್ತೆ ದೂಳುಮಯವಾಗಿದೆ ಈ ಬಗ್ಗೆ ಅಲ್ಲಿನ ಜನರ ಮಾತನ್ನೋಮ್ಮೆ ಕೇಳಿ.
ಕೇಳಿದ್ರಲ್ಲಾ ಈ ಸಮಸ್ಯೆ ಬಗ್ಗೆ ನಾವು ಲೋಕೋಪಯೋಗಿ ಇಲಾಖೆಗೆ ಹೋದ್ರೆ ಅತಿವೃಷ್ಟಿ ಕಾಮಗಾರಿ ಒಳಗೆ ರಸ್ತೆ ತಾತ್ಕಾಲಿಕ ದುರಸ್ತಿ ಮಾಡ್ತಾ ಇದೇವಿ ಈಗಾಗಲೇ ಚಾಲೂ ಆಗೇತಿ ಅಂದ್ರು ಆದ್ರೆ ಆ ರಸ್ತೆಯಲ್ಲಿ ಈ ಕೆಲ್ಸಾ ನಡೆದೆ ಇಲ್ಲಾ ಈ ಬಗ್ಗೆ ಅಧಿಕಾರಿಗಳು ಮುತುವರ್ಜಿ ವಹಿಸಿ ಖುದ್ದಾಗಿ ಸ್ಥಳಕ್ಕೆ ಬೇಟ್ಟಿ ಆದ್ರೆ ಮಾತ್ರ ರಸ್ತೆ ಅಭಿವೃದ್ಧಿಯಾಗೋದು ಖಾತ್ರಿ ನೋಡ್ರಿ.
Kshetra Samachara
08/11/2020 01:56 pm