ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಹದಗೆಟ್ಟ ರೋಡ್ ನೆಟ್ಟಗೆ ಯಾವಾಗ? 5 ಕೋಟಿ ಅನುದಾನ ಬಲವಿದ್ದರೂ "ಎದ್ದೇಳದ" ದ್ವಿಪಥ!

ಅಣ್ಣಿಗೇರಿ : ಪಟ್ಟಣದ ಮಧ್ಯಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 63ರ ಅಂಬಿಗೇರಿ ಕ್ರಾಸ್‌ನಿಂದ ಪೊಲೀಸ್‌ ಠಾಣೆವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ಐದು ಕೋಟಿ ಅನುದಾನ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಇದರ ಕಡೆ ಕಿಂಚಿತ್ತು ಗಮನ ಹರಿಸುತ್ತಿಲ್ಲಾ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಪಟ್ಟಣದ ಮಧ್ಯಭಾಗದಲ್ಲಿ ಈ ರಸ್ತೆ ಹಾಯ್ದು ಹೋಗಿರುವುದರಿಂದ ಅಕ್ಕ ಪಕ್ಕದ ಮನೆ, ಬ್ಯಾಂಕ್‌ಗಳು, ಹೋಟಲ್‌ಗಳಲ್ಲಿ ಧೂಳಿನ ಮಜ್ಜನ ಹೆಚ್ಚಾಗುತ್ತಿರುವದು ಹೇಳತೀರದ ಮಾತಾಗಿದೆ. ಈಗಾಗಲೇ ಕಳೆದ ವರ್ಷ ಈ ರಸ್ತೆ ಕಾಮಗಾರಿಯನ್ನು ಅರ್ಧ ಭಾಗದಲ್ಲಿ ಮಾಡಲಾಗಿತ್ತು. ಇದು ಕೂಡ ಕಳಪೆ ಗುಣಮಟ್ಟದಿಂದ ಕೂಡಿರುವುದರಿಂದ ರಸ್ತೆ ಮಧ್ಯಭಾಗದಲ್ಲಿಯೇ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಅಪಘಾತಕ್ಕೆ ಕೈ ಮಾಡಿ ಕರೆಯುತ್ತಿವೆ. ಈ ರಸ್ತೆಯಲ್ಲಿ ವಾಹನಗಳು ಸಂಚರಿಸಿದರೆ ಅದರ ಹಿಂದೆ ಧೂಳಿನ ವಾತಾವರಣವನ್ನು ನಾವು ಅನುಭವಿಸಬೇಕಾಗಿದೆ.

ಇನ್ನೂ ಮುಂದಾದರೂ ಸಂಬಂದಿಸಿದ ಅಧಿಕಾರಿಗಳು ಇದರ ಕಡೆ ಗಮನ ಹರಿಸಿ ನೂತನ ತಾಲೂಕಿನ ದ್ವಿಪಥ ರಸ್ತೆಯನ್ನು ಪೂರ್ಣ ಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Edited By :
Kshetra Samachara

Kshetra Samachara

01/10/2020 09:05 pm

Cinque Terre

57.36 K

Cinque Terre

5

ಸಂಬಂಧಿತ ಸುದ್ದಿ