ಅಣ್ಣಿಗೇರಿ: ಹಲವಾರು ವರ್ಷಗಳಿಂದ ಸಮಸ್ಯೆಯಾಗಿರುವ ರಾಡಿ ಹಳ್ಳದ ಪ್ರವಾಹದಿಂದ ರೈತರ ಜಮೀನುಗಳಲ್ಲಿ ದೊಡ್ಡ ಪ್ರಮಾಣದ ನೀರು ನುಗ್ಗಿ ಜಮೀನುಗಳು ನಾಶವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ರಾಡಿ ಹಳ್ಳದ ಹೋರಾಟ ಸಮಿತಿ ಅಧ್ಯಕ್ಷರಾದ ಪ್ರದೀಪ ಲೆಕೇನಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣದಲ್ಲಿ ಐ ಬಿ ಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯತ್ನಳ್ಳಿ ಗ್ರಾಮದಲ್ಲಿ ಹುಟ್ಟಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಹತ್ತಿರ ಬೆಣ್ಣಿಹಳ್ಳ ಸೇರುತ್ತದೆ. ತಾಲೂಕಿನ ನಲವಡಿ,ಉಮಚಗಿ, ಶಿಶ್ವಿನಹಳ್ಳಿ, ಬೆನ್ನೂರು, ಇಂಗಳಹಳ್ಳಿ,ದುಂದುರ, ಬಲ್ಲರವಾಡ ಗ್ರಾಮಗಳ ರೈತರು ಸೇರಿಕೊಂಡು ಬರುವ ದಿನಗಳಲ್ಲಿ ಹೋರಾಟ ಸಮಿತಿಯ ಮೂಲಕ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಶಂಕರ ನಾಯ್ಕರ್, ಎನ್.ಕೆ.ಶಿವನಗೌಡರ್, ಬಸವರಾಜ್ ಶೆಟ್ಟರ್, ಪ್ರಧಾನಿ ನಾಯ್ಕರ್, ಆನಂದ ಗೌಡ ಪಾಟೀಲ್ ಉಪಸ್ಥಿತರಿದ್ದರು.
Kshetra Samachara
16/06/2022 07:48 am