ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಸುರಿದ ಅಕಾಲಿಕ ಮಳೆಗೆ ಈಗಾಗಲೇ ರೈತ ಸಮುದಾಯ ಬಿತ್ತನೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಬೀಜ ಗೊಬ್ಬರ ಸಂಗ್ರಹ ಮಾಡಿಕೊಂಡಿರುವ ರೈತರು ಇನ್ನೇನೂ ಬಿತ್ತನೆ ಕಾರ್ಯಕ್ಕೆ ಅಣಿಯಾಗಬೇಕಿದೆ.
ಹೌದು. ಹುಬ್ಬಳ್ಳಿಯ ತಾಲೂಕಿನಲ್ಲಿ 36,529 ಹೆಕ್ಟೇರ್ ಬಿತ್ತನೆಗೆ ಸಿದ್ಧವಾಗಿದೆ. ಅಲ್ಲದೇ ಹುಬ್ಬಳ್ಳಿ ನಗರದಲ್ಲಿ 8,800 ಹೆಕ್ಟೇರ್ ಭೂಮಿ ಬಿತ್ತನೆಗೆ ಸಿದ್ಧಗೊಂಡಿದ್ದು, ಒಟ್ಟು 45,329 ಹೆಕ್ಟೇರ್ ಭೂಮಿ ಬಿತ್ತನೆಗೆ ರೈತ ಸಮುದಾಯ ಸಿದ್ಧಪಡಿಸಿದ್ದು, ಇನ್ನೇನೂ ಕೃಷಿ ಚಟುವಟಿಕೆಗಳು ಗರಿಗೇದರಲಿವೆ. ಈಗಾಗಲೇ ಬೀಜ ಹಾಗೂ ಗೊಬ್ಬರದ ಸಮಸ್ಯೆಗಳಿಗೆ ಕೃಷಿ ಇಲಾಖೆ ಬ್ರೇಕ್ ಹಾಕಿದ್ದು, ಅಗತ್ಯ ಬೀಜ ರಸಗೊಬ್ಬರ ವಿತರಣೆಗೆ ಮುಂದಾಗಿದೆ. ಈಗಾಗಲೇ ಯೂರಿಯಾ, ಡಿಎಪಿ ಗೊಬ್ಬರ ದಾಸ್ತಾನು ಜೊತೆಗೆ ಬಿತ್ತನೆ ಬೀಜಗಳಾದ ಸೋಯಾಬಿನ್, ಹೆಸರು, ತೊಗರಿ ಸೇರಿದಂತೆ ಎಲ್ಲ ಅಗತ್ಯ ಬೀಜಗಳನ್ನು ಪೂರೈಕೆ ಮಾಡಲು ನಿರ್ಧಾರ ಮಾಡಿದೆ.
ಇನ್ನೂ ಜಿಲ್ಲೆಯಾದ್ಯಂತ ಬಿತ್ತನೆ ಅಗತ್ಯಕ್ಕಿಂತ ಹೆಚ್ಚಿನ ಮಳೆಯಾಗಿದ್ದು, ರೈತರ ಭೂಮಿಯಲ್ಲಿ ನೀರು ನಿಂತಿರುವ ಹಾಗೂ ತೇವಾಂಶ ಹೆಚ್ಚಿರುವ ಕಾರಣ ಬಿತ್ತನೆಗೆ ವಿಳಂಬ ಮಾಡುತ್ತಿದ್ದು, ಇನ್ನೇನೂ ಕೆಲವು ದಿನಗಳಲ್ಲಿ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ. ಈಗಾಗಲೇ ಕೃಷಿ ಇಲಾಖೆಯಿಂದ ಅಗತ್ಯ ಬೀಜ ಗೊಬ್ಬರಗಳನ್ನು ಸಂಬಂಧಿಸಿದ ಗ್ರಾಮೀಣ ಮಟ್ಟದ ಕೃಷಿ ಇಲಾಖೆಗೆ ರಪ್ತು ಮಾಡಲಾಗಿದ್ದು, ಈ ಬಾರಿ ಯಾವುದೇ ಸಮಸ್ಯೆಯಾಗದಂತೆ ಬಿತ್ತನೆಗೆ ಅವಶ್ಯಕತೆ ಇರುವ ಉತ್ಪನ್ನಗಳನ್ನು ಒದಗಿಸಲಾಗುತ್ತದೆ ಎನ್ನುತ್ತಾರೆ ಸಹಾಯಕ ನಿರ್ದೇಶಕರು.
ಒಟ್ಟಿನಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳಿಗೆ ಕಾಲ ಕೂಡಿ ಬಂದಿದ್ದು, ಬಿತ್ತನೆ ಕಾರ್ಯಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಈ ಬಾರಿ ವರುಣನ ದಯೆಯಿಂದ ಎಲ್ಲ ಕಡೆಯೂ ಸಮೃದ್ಧಿಯ ಪಸಲು ಬರಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
Kshetra Samachara
25/05/2022 07:55 pm