ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಿತ್ಯ ರೈತ ಕುಲ ಸಂಚಾರದ ರಸ್ತೆಯಲ್ಲೇಲ್ಲಾ ತುಂಬಿದೆ ಕಲ್ಲು, ಮುಳ್ಳು, ಕಂಟಿ

ಕುಂದಗೋಳ : ಹಳ್ಳಿಗಳ ರಸ್ತೆ ಒಮ್ಮೆ ಸುಧಾರಣೆ ಕಂಡ್ರೇ ಆಯ್ತು ಮರಳಿ ಅದೆಷ್ಟೇ ವರ್ಷ ಗತಿಸಿ ಆ ರಸ್ತೆ ಹಾಳಾದ್ರೂ ಈ ಅಧಿಕಾರಿಗಳು, ಜನಪ್ರತಿನಿಧಿಗಳು, ಪಂಚಾಯಿತಿ ಸದಸ್ಯರು ರಸ್ತೆ ದುರಸ್ತಿ ಗೋಡೆವೆಗೆ ಹೋಗೋದಿಲ್ಲ ನೋಡಿ.

ಹೀಗೆ ರಸ್ತೆ ತುಂಬಾ ಹಿಡಿ ಗಾತ್ರದ ಹಳ್ಳುಗಳನ್ನು ತುಂಬಿಕೊಂಡು ವಾಹನ ಸವಾರರಿಗೆ ಬಡಿಯುವಂತೆ ಮುಳ್ಳು ಕಂಟಿಗಳನ್ನು ಹೊತ್ತು ನಿಂತಿರುವ ಕಡಪಟ್ಟಿ ಗ್ರಾಮದ ದೇಸಾಯಿ ಹೊಲದ ಬರೋಬ್ಬರಿ 8 ಕಿಲೋ ಮೀಟರ್ ರಸ್ತೆ ಈ ಅವ್ಯವಸ್ಥೆಗೆ ಒಳಪಟ್ಟಿದ್ದರೂ ಇಂದಿಗೂ ಯಾವ ಅಧಿಕಾರಿಗಳು ಗಮನಿಸಿಲ್ಲ ಈ ಬಗ್ಗೆ ಅಲ್ಲಿನ ರೈತರು ಎನು ಹೇಳ್ತಾರೆ ಕೇಳಿ.

ಕೇಳಿದ್ರಲ್ಲಾ ಈ ಮೊದಲು ಎರೆಡು ವಾಹನ ಸರಾಗವಾಗಿ ಓಡಾಡುತ್ತಿದ್ದ ರಸ್ತೆಯ ಮಣ್ಣು ಅಕ್ಕ ಪಕ್ಕದ ಹಳ್ಳಕ್ಕೆ ಜರಿದು ರಸ್ತೆ ಇಕ್ಕಟ್ಟಾದ ಪರಿಣಾಮ ಒಂದು ವಾಹನ ದಾಟಬೇಕಾದ್ರೇ ಮತ್ತೊಂದು ವಾಹನ ನಿಂತು ಸಾಗಬೇಕಾದ ಪರಿಣಾಮ 2000 ಎಕರೆಗಿಂತ ಅಧಿಕ ಹೊಲಗಳ ರೈತರಿಗೆ ನಿತ್ಯ ಸಂಚಾರ ಕಷ್ಟವಾಗಿದೆ. ಈ ರಸ್ತೆಯಿಂದ ಹಳ್ಳಕ್ಕೆ ಹರಿದ ಮಣ್ಣು ಸರಿಪಡಿಸಿ ತಗ್ಗು ಗುಂಡಿ ಮುಚ್ಚಿ ಸಾಕು ಎನ್ನುವ ರೈತರ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕಿದೆ.

Edited By : Manjunath H D
Kshetra Samachara

Kshetra Samachara

03/11/2020 02:57 pm

Cinque Terre

30.92 K

Cinque Terre

2

ಸಂಬಂಧಿತ ಸುದ್ದಿ