ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಅಪಾಯಕ್ಕೆ ಆಹ್ವಾನ‌ ನೀಡುವ ವಿದ್ಯುತ್ ತಂತಿ‌ ಹಾಗೂ ಟಿಸಿ‌

ಕಲಘಟಗಿ:ತಾಲೂಕಿನ‌ ಮಡ್ಕಿಹೊನ್ನಳ್ಳಿ ಗ್ರಾಮದ ಹೊಸ (ಆಶ್ರಯ) ಪ್ಲಾಟ್ ನಲ್ಲಿರುವ ಅಪಾಯಕ್ಕೆ ಆಹ್ವಾನ‌ ನೀಡುವಂತಿರುವ ವಿದ್ಯುತ್ ಟಿ ಸಿ ಸ್ಥಳಾಂತರಿಸುವ ಹಾಗೂ ವಿದ್ಯುತ್ ತಂತಿಯನ್ನು ಸರಿಪಡಿಸು ಅಗತ್ಯವಿದೆ.

ಎರಡು ವರ್ಷಗಳಿಂದ ಇಲ್ಲಿನ‌‌ ನಿವಾಸಿಗಳು ಸಮಸ್ಯೆಯನ್ನು ಸರಿಪಡಿಲು ಆಗ್ರಹಿಸಿದ್ದರು ಸಹ ಅಪಾಯಕ್ಕೆ ಆಹ್ವಾನ ‌ನೀಡುವ ಟಿಸಿ

ಸ್ಥಳಾಂತರಿಸದೇ ಹಾಗೂ ವಿದ್ಯುತ್ ತಂತಿ ಸರಿಪಡಿಸದೇ ಅಧಿಕಾರಿಗಳು ‌ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ.

ಟಿ ಸಿ‌ ನೀರು‌ ನಿಲ್ಲುವ ಸ್ಥಳದಲ್ಲಿ ಇದ್ದು ಈಗಾಗಲೇ ಇಬ್ಬರು‌ ವ್ಯಕ್ತಿಗಳಿಗೆ ವಿದ್ಯುತ್ ಶಾಕ್ ಹೊಡೆದು ಅಪಾಯ ಸಂಭವಿಸಿದೆ ಹಾಗೂ ವಿದ್ಯುತ್ ತಗಲಿ ಎಮ್ಮೆ ಸಾವನ್ನಪ್ಪಿದೆ.

ಈ ಕುರಿತು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರಿಗೆ ಗ್ರಾಮ ಪಂಚಾಯತಿಯಿಂದ ಪತ್ರ ‌ಬರೆದು ಎಚ್ಚರಿಸಿದರು ಸಹ ಜೋತು ಬಿದ್ದ ವಿದ್ಯುತ್ ತಂತಿ ಸರಿಪಡಿಸದೇ ಇರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಅಪಾಯ ಸಾಂಭವಿಸುವ ಮುನ್ನ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಿ ಜನರ ಜೀವ ರಕ್ಷಿಸ ಬೇಕಿದೆ ಎಂಬುದು ಪಬ್ಲಿಕ್‌ ‌ನೆಕ್ಸ್ಟ್ ಕಳಕಳಿಯಾಗಿದೆ.

Edited By : Manjunath H D
Kshetra Samachara

Kshetra Samachara

02/11/2020 10:28 pm

Cinque Terre

22.24 K

Cinque Terre

1

ಸಂಬಂಧಿತ ಸುದ್ದಿ