ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ತೆರಿಗೆ ತುಂಬಿದರೂ ಆಸ್ತಿ ಜಪ್ತ್ ಮಾಡ್ತಾರಂತೆ.... ನಾಗರಿಕರೆ ಹುಷಾರ್

ಈ ಮಾಗಣಿ ನೋಟಿಸ್ ಜಾರಿಗೊಂಡ 15 ದಿನದೊಳಗೆ ಸದರ ಹಣವನ್ನು ಮಹಾನಗರ ಪಾಲಿಕೆಗೆ ಸಂದಾಯ ಮಾಡದಿದ್ದಲ್ಲಿ ಅಥವಾ ಅದನ್ನು ಪಾವತಿ ಮಾಡದಿರಲು ಸಾಕಷ್ಟು ಕಾರಣಗಳನ್ನು ಪಾಲಿಕೆಗೆ ತೃಪ್ತಿಯಾಗುವ ರೀತಿಯಲ್ಲಿ ನೀಡದಿದ್ದಲ್ಲಿ ಖರ್ಚುಗಳ ಸಮೇತ ಸದರ ಹಣ ವಸೂಲಿಗೆ ಜಪ್ತ ವಾರಂಟ ಅಥವಾ ಅಟ್ಯಾಚಮೆಂಟ್ ಮಾಡಲಾಗುವುದು.......

ಆಸ್ತಿಕರ ತುಂಬಿದ್ದರೂ ನನ್ನಂತೆ ಅನೇಕ ನಾಗರೀಕರಿಗೆ ಪಾಲಿಕೆ ನೀಡಿದ ನೋಟಿಸಿನ ಒಕ್ಕಣಿಕೆಯ ವೈಖರಿಯಿದು! ಅರ್ಥವಾಗದ "ಕನ್ನಡ"ದಲ್ಲಿರುವ ಈ ನೋಟಿಸ್, ಅಧಿಕಾರಿಗಳ ಯಡವಟ್ಟಿನಿಂದಾಗಿ ಅಕ್ಷರಶಹ: ಎಲ್ಲ ಕರದಾತರೂ ಕಂಗಾಲು!! ವಿಶೇಷತ: ಹಿರಿಯ ನಾಗರಿಕರಿಗೆ ಮಾನಸಿಕ ಹಿಂಸೆ!!!

ಕಳೆದ ಎಪ್ರಿಲ್ 18 ರಂದೇ ನಾನು ₹ 1,515.00 ಆಸ್ತಿಕರ ತುಂಬಿದ್ದೇನೆ.[ಡಿಜಿಟಲ್ ಪಾವತಿ] ಮುಂದೆ ಆಸ್ತಿಕರ ಸ್ವಲ್ಪು ಹೆಚ್ಚಾದದ್ದೇನೊ ನಿಜ. ತುಂಬಿದ್ದನ್ನು ಲೆಕ್ಕಿಸದೇ ಪೂರ್ತಿ ಹಣ ಕೊಡಿ ಎಂದು ಹಿಂದು ಮುಂದು ನೋಡದೇ ನೋಟಿಸ್ ನೀಡಿದ ಪಾಲಿಕೆಯ ಹುಚ್ಚಾಟಕ್ಕೆನೆನ್ನಬೇಕೋ ನಾನರಿಯೇ.

ಅಧಿಕಾರಿಗಳನ್ನು ಕೇಳಿದರೆ ಕಣ್ತಪ್ಪು' 'ಪ್ರಮಾದ' ಎಂಬೆರಡು ಶಬ್ದಗಳನ್ನು ಬಳಸಿ 'ಸೂಕ್ತ ಕ್ರಮ' ಕೈಕೊಳ್ಳಲಾಗುವುದೆಂದು ಹೇಳಿ ಕೈತೊಳೆದುಕೊಂಡು ಬಿಡುತ್ತಾರೆ.

ಇನ್ನು ನೋಟಿಸಿನ ಬರವಣಿಗೆಯ ಬಗ್ಗೆರಡು ಮಾತು ಬರೆಯಲೇಬೇಕು. ಇದು ಯಾವುದೋ ಒಬಿರಾಯನ ಕಾಲದಲ್ಲಿ ತಯಾರಿಸಿದ್ದು! ಬದಲಾವಣೆ ಬಯಸದವರ ಬಗ್ಗೆ ಬೇಸರ ಬಾರದೇ ಇರದು!! ಸೂಕ್ತ ಕನ್ನಡ ಪದಗಳು ಸಿಗದೇ ಆಂಗ್ಲ ಭಾಷೆಗೆ ಶರಣಾಗಿರುವ ಪಾಲಿಕೆಗೊಂದು ದೊಡ್ಡ ನಮಸ್ಕಾರ!!!

ಕನ್ನಡದ ಬಗ್ಗೆ ನಿರ್ಲಕ್ಷ ತೋರುತ್ತ ಕನ್ನಡದ ಕೊಲೆ ಮಾಡುತ್ತಿರುವ "ಮಹಾನಗರ ಪಾಲಿಕೆ"ಗೆ ಬರುವ ನವೆಂಬರ 1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಪ್ರಶಸ್ತಿಯನ್ನಾದರೂ ನೀಡಬೇಕೆಂದು ಯಾವ ಕನ್ನಡಿಗರಿಗಾದರೂ ಅನಿಸದೇ ಇರಲಾರದು!!

● ನಾರಾಯಣ ವೆಂ.ಭಾದ್ರಿ.,ಶ್ರೀನಿಧಿ", ಈಡಬ್ಲೂಎಸ್ 624,

ಎರಡನೇಯ ಅಡ್ಡರಸ್ತೆ,, ನವನಗರ,ಹುಬ್ಬಳ್ಳಿ.

(ಮೊ) 92432 8972.

Edited By :
Kshetra Samachara

Kshetra Samachara

24/10/2020 08:54 am

Cinque Terre

18.21 K

Cinque Terre

3

ಸಂಬಂಧಿತ ಸುದ್ದಿ