ಅಣ್ಣಿಗೇರಿ : ಸ್ವಾಮಿ ಈ ಸರ್ಕಾರದವ್ರ ಊರಿಗೆ ಕುಡಿಯುವ ನೀರು ಸರಬರಾಜು ಮಾಡಲೇಂದು ನಿರ್ಮಿಸಿದ ವಾಟರ್ ಟ್ಯಾಂಕ್ ಸದ್ಯ ಹವಾ ನಿಯಂತ್ರಿತ ಕ್ವಾಟರ್ ಟ್ಯಾಂಕ್ ಆಗಿದ್ದು ಹಗಲು ಹೊತ್ತಿನಲ್ಲೇ ಕುಡುಕರ ಹಾವಳಿ ಹೆಚ್ಚಾಗಿ ಸುತ್ತಲಿನ ನಿವಾಸಿಗಳ ಬದುಕಿಗೆ ದಕ್ಕೆ ಬಂದ್ರೂ ಇಲ್ಲಿನ ಪುರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಚಿರ ನಿದ್ರೆಗೆ ಜಾರಿದ್ದಾರೆ.
ಹೌದು ! ಇದೋ ಅಲ್ನೋಡಿ ಆಸಾಮಿ ಕಣ್ಮುಚ್ಚಿ ಹೇಂಗ್ ಎಣ್ಣೆ ಬಾಡಿಗೆ ಎರಸ್ತಾನೆ ಹೀಗೆ ನಿತ್ಯವು ಕುಡುಕರ ಹಾವಳಿಯಿಂದ ಸುತ್ತಲೂ ಟನ್ ಗಟ್ಟಲೇ ವಿಧ ವಿಧದ ಸಾರಾಯಿ ಪಾಕೆಟ್ ಬಿದ್ದಿದ್ದು ಕುಡಿದ ನಂತರ ಗ್ಲಾಸು ಬಾಟಲಿಗಳನ್ನು ಇಲ್ಲೇ ಒಡೆದು ಮಲ ಮೂತ್ರ ಮಾಡಿ ಹೋಗಿದ್ದಾರೆ ಇದನ್ನ ಸ್ಥಳೀಯರು ಖಂಡಿಸಲು ಹೋದ್ರೆ ಕುಡುಕರು ನೆಟ್ಟಗಿರೋರನ್ನೆ ಹೆದರಿಸಿ ಬಿಡ್ತಾರೆ.
ಈ ಅವ್ಯವಸ್ಥೆ ಸಂಚಾರ ಕಷ್ಟವಾದ ಜನರು ಬೇರೆ ದಾರಿ ಹಿಡಿದಿದ್ದು ಮಹಿಳೆಯರು ಮಕ್ಕಳು ಈ ಕುಡಕರ ಹಾವಳಿ ಪರಿಣಾಮ ಈ ವಾಟರ್ ಟ್ಯಾಂಕ್ ಪಕ್ಕದ ರಸ್ತೆಯಲ್ಲಿ ಸುಳಿಯುವುದನ್ನೇ ನಿಲ್ಲಿಸಿದ್ದಾರೆ ದಯವಿಟ್ಟು ಮಲಗಿರೋ ಪುರಸಭೆ ಅಧಿಕಾರಿಗಳೇ ಹಾಗೂ ಪೊಲೀಸರೇ ಈ ಕುಡಕರ ಹಾವಳಿಗೆ ಕಡಿವಾಣ ಹಾಕಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
20/10/2020 10:21 am