ಧಾರವಾಡ: ಧಾರವಾಡದ ನವಲೂರು ಬಳಿ ಬಿಆರ್ ಟಿಎಸ್ ನಿರ್ಮಿಸಿರುವ ಬ್ರಿಜ್ ಮತ್ತೆ ಕುಸಿದಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಈ ಹಿಂದೆ ನಿರ್ಮಾಣ ಹಂತದ ಈ ಬ್ರಿಜ್ ನ ಪ್ಯಾನಲ್ ಗಳು ಕಿತ್ತು ಬೀಳುತ್ತಿರುವ ಬಗ್ಗೆ ವರದಿಯಾಗಿತ್ತು. ಸ್ವತಃ ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕ ಅರವಿಂದ ಬೆಲ್ಲದ ಅವರೇ ಈ ಬ್ರಿಜ್ ಕಳಪೆಮಟ್ಟದ್ದಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಸಿಎಂಗೆ ದೂರು ಸಹ ನೀಡಿದ್ದರು.
ಇದರ ಬೆನ್ನಲ್ಲೇ ಮತ್ತೆ ಈ ಬ್ರಿಜ್ ಕುಸಿದಿದ್ದು, ಅಲ್ಲಿನ ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕೂಡಲೇ ಸಂಬಂಧಪಟ್ಟವರು ಮುಂದಾಗುವ ಅನಾಹುತವನ್ನು ತಡೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
Kshetra Samachara
19/10/2020 06:58 pm