ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಿ:ನೀರಿನ ಸಮಸ್ಯೆ ಬಹಳ ಆಗಿದೆ

ಹುಬ್ಬಳ್ಳಿ: ಗ್ರಾಮೀಣ ಭಾಗದ ಜನರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸದುದ್ದೇಶದಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೇ ಶುದ್ಧ ಕುಡಿಯುವ ನೀರಿನ ಘಟಕಗಳು ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲ ಎಂಬುವಂತಾಗಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಶುದ್ಧ ನೀರಿನ ಘಟಕಗಳಿದ್ದು,ಯರಗುಪ್ಪಿ ಎರಡು,ಚಿಕ್ಕನೇರ್ತಿ ಒಂದು ಮುಳ್ಳೋಳ್ಳಿಯಲ್ಲಿ ಒಂದು ಒಟ್ಟು ನಾಲ್ಕು ಬಂದ್ ಆಗಿದ್ದು,ಕಾರ್ಯಾರಂಭ ಮಾಡುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ.

ಇನ್ನೂ ಸ್ಥಗಿತಗೊಂಡ ಸಂದರ್ಭದಲ್ಲಿ ದುರಸ್ತಿ ಮಾಡಿ ಪ್ರಾರಂಭ ಮಾಡಿದ್ದರೂ ಕೂಡ ಮತ್ತೇ ಕಿರಿ ಕಿರಿಯಾಗಿ ಬಂದ್ ಆಗುತ್ತಿದ್ದು,ಶಾಶ್ವತ ಪರಿಹಾರ ಮಾತ್ರ ಇಲ್ಲವಾಗಿದೆ.ಗ್ರಾಮದ ಜನರು ಶುದ್ಧ ನೀರು ಬೇಕೆಂದರೇ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿ ನೀರನ್ನು ತೆಗೆದುಕೊಂಡು ಬರಬೇಕಾಗಿದೆ..

ಸಮಸ್ಯೆಗಳನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

17/10/2020 09:23 pm

Cinque Terre

12.87 K

Cinque Terre

0

ಸಂಬಂಧಿತ ಸುದ್ದಿ