ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮನೆ ಬಿದ್ದರೂ ತಿರುಗಿ ನೋಡದ ಅಧಿಕಾರಿಗಳು; ಈ ತಾಯಿಯ ಕಷ್ಟ ಕೇಳುವವರೇ ಇಲ್ಲ

ಸ್ಪೇಷಲ್ ಸ್ಟೋರಿ

ವರದಿ: ಉದಯ ಗೌಡರ

ಕಲಘಟಗಿ: ತಾಲೂಕಿನ ಹಾರೋಗೇರಿ ಗ್ರಾಮದ ಈ ಒಂದು ಮಹಿಳೆಯ ಕಷ್ಟ ನೋಡಿದರೆ ಕರಳು ಹಿಂಡುವಂತಾಗುತ್ತದೆ. ಸುಮಾರು ಎಂಟು ವರ್ಷಗಳ ಕಾಲ ಈ ತಾಯಿ ಈ ಚಿಕ್ಕ ಮನೆಯಲ್ಲಿ ವಾಸವಾಗಿದ್ದು, ರೋಗಗಸ್ಥ ಮಗನ ಜೊತೆ ಜೀವನ ನಡೆಸುತ್ತಿದ್ದಾರೆ.

ಈ ತಾಯಿಯು ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಅತಿಯಾದ ಮಳೆಯಿಂದಾಗಿ ಈಗಿರುವ ಮನೆಯು ಕೂಡ ಬಿದ್ದಿದ್ದು, ತಾಯಿ-ಮಗ ಪಕ್ಕದ ಕಟ್ಟೆಯ ಮೇಲೆ ಮಲಗುತ್ತಾ ಜೀವನ ಕಳೆಯುತ್ತಿದ್ದಾರೆ.

ಈ ತಾಯಿಯ ಪರಿಸ್ಥಿತಿಯನ್ನು ಕಂಡ ಗ್ರಾಮದ ಜನರು ಇವರಿಗೆ ತಮಗೆ ಆದಷ್ಟು ಸಹಾಯ ಮಾಡುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಈ ತಾಯಿಗೆ ಶಾಶ್ವತ ಪರಿಹಾರ ನೀಡಬೇಕಾಗಿದೆ.

Edited By : Manjunath H D
Kshetra Samachara

Kshetra Samachara

15/09/2022 09:08 pm

Cinque Terre

83.93 K

Cinque Terre

11

ಸಂಬಂಧಿತ ಸುದ್ದಿ