ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಾಲು ನೋವಿನಿಂದ ಬಳಲುತ್ತಿದ್ದ ವೃದ್ಧನಿಗೆ ಈ ಯುವಕ ಮಾಡಿದ ಸಹಾಯ ಎಂತದ್ದು ನೋಡಿ

ಧಾರವಾಡ: ಆ ವೃದ್ಧ ಮಲಗಿದ ಜಾಗದಲ್ಲೇ ಮಲಗಿ ನೋವಿನಿಂದ ಒದ್ದಾಡುತ್ತಿದ್ದ. ಕಾಲಿಗೆ ಗಾಯವಾಗಿದ್ದರಿಂದ ಮೇಲೇಳಲು ಆಗದೇ, ಕಾಲಿಗೆ ಹುಳು ಬಿದ್ದು ಯಾರೂ ಮುಟ್ಟಲಾರದಂತಹ ಸ್ಥಿತಿಯಲ್ಲಿದ್ದ. ಆದರೆ, ಈ ವೃದ್ಧನ ನೆರವಿಗೆ ಧಾವಿಸಿದ ಯುವಕ ಆ ವೃದ್ಧನಿಗೆ ಸ್ನಾನ ಮಾಡಿಸಿ, ಕಾಲಿಗೆ ಬ್ಯಾಂಡೇಜ್ ಕಟ್ಟಿ ಕಿಮ್ಸ್‌ಗೆ ದಾಖಲಿಸಿದ್ದಾನೆ.

ಹಾಗಾದ್ರೆ ಯಾರು ಆ ಯುವಕ ಅಂತೀರಾ? ಇಲ್ಲಿದೆ ನೋಡಿ ಡೀಟೆಲ್ಸ್.

ಈ ದೃಶ್ಯಗಳಲ್ಲಿ ಕಾಣುತ್ತಿರುವ ಯುವಕನ ಹೆಸರು ಸೌರಭ ಕಮ್ಮಾರ. ಈತ ಪ್ರಾಣಿಪ್ರಿಯ. ಇಂತಹ ವೃದ್ಧರು ಯಾರಾದರೂ ಕಷ್ಟದಲ್ಲಿದ್ದರೆ ಅವರ ನೆರವಿಗೆ ಧಾವಿಸುತ್ತಾನೆ.

ಇಂದು ಧಾರವಾಡದ ಸವದತ್ತಿ ರಸ್ತೆಯಲ್ಲಿ ವೃದ್ಧನೋರ್ವ ಕಾಲಿಗೆ ಪೆಟ್ಟು ಮಾಡಿಕೊಂಡು ಮೇಲೇಳಲಾಗದೇ ಕಳೆದ ಕೆಲ ದಿನಗಳಿಂದ ಅಲ್ಲೇ ಬಿದ್ದು ಒದ್ದಾಡುತ್ತಿದ್ದ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೋದ ಸೌರಭ, ಆ ವೃದ್ಧನಿಗೆ ಸ್ನಾನ ಮಾಡಿಸಿ, ಗಾಯವಾದ ಕಾಲಿಗೆ ಬ್ಯಾಂಡೇಜ್ ಮಾಡಿ, ಆತನಿಗೆ ಬೇರೆ ಬಟ್ಟೆ ಹಾಕಿ ಕಿಮ್ಸ್‌ಗೆ ದಾಖಲಿಸಿದ್ದಾನೆ.

ಈ ವೃದ್ಧನಿಗೆ ಯಾರೂ ದಿಕ್ಕಿಲ್ಲದೇ ಇರುವುದರಿಂದ ಆತ ಒಂದೇ ಸ್ಥಳದಲ್ಲಿ ಬಿದ್ದು ನರಳಾಡುತ್ತಿದ್ದ. ಸದ್ಯ ಆತನ ಆರೈಕೆ ಮಾಡಿರುವ ಸೌರಭ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದಾನೆ. ಇವರ ಈ ಸಾಮಾಜಿಕ ಕಳಕಳಿಗೆ ನಾವೂ ಒಂದು ಸಲಾಂ ಹೇಳಲೇಬೇಕಲ್ಲವೇ?

Edited By : Shivu K
Kshetra Samachara

Kshetra Samachara

04/07/2022 10:23 pm

Cinque Terre

95.15 K

Cinque Terre

49

ಸಂಬಂಧಿತ ಸುದ್ದಿ