ಹುಬ್ಬಳ್ಳಿ: ಆತ ಎರಡೂ ಕಣ್ಣು ಕಾಣದ ಅಂಧ ಕಲಾವಿದ. ಜೀವನಕ್ಕೆ ಸಂಗೀತವೇ ಅನ್ನ ನೀಡುತ್ತಿದೆ. ಸಾಕಷ್ಟು ಸಂಗೀತ ಜ್ಞಾನ ಇದ್ದರೂ ಬಡತನ ಬೆಂಬತ್ತಿದೆ. ಇತ್ತ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನವಿಲ್ಲದೆ ಬೀದಿಯಲ್ಲಿಯೇ ಸುತ್ತಾಡಿ, ಹಾಡುತ್ತಾ ಹೊಟ್ಟೆ ಹೊರೆಯಬೇಕಾಗಿದೆ.
ಹೌದು... ಹೀಗೆ ಹುಬ್ಬಳ್ಳಿಯ ಉಣಕಲ್ ವೃತ್ತದ ಬಳಿ ವರನಟ ಡಾ.ರಾಜ್ ಕುಮಾರ್ ಅವರ ಹಾಡನ್ನು ಅಷ್ಟೇ ಸುಶ್ರಾವ್ಯವಾಗಿ ಹಾಡುವ ಮೂಲಕ ಜನರ ಮನರಂಜಿಸುತ್ತಿರುವ ಈ ಕಲಾವಿದನ ಹೆಸರು ಸುಲೇಮಾನ್. ಮೂಲತಃ ಹಾವೇರಿ ಜಿಲ್ಲೆಯ ಈ ಹಾಡುಗಾರ, ಹುಟ್ಟಿನಿಂದಲೇ ಎರಡೂ ಕಣ್ಣುಗಳಿಲ್ಲದ ನತದೃಷ್ಟ.
ಸಾಕಷ್ಟು ಸಂಗೀತ ಜ್ಞಾನವಿರುವ ಸುಲೇಮಾನ್, ಹಾರ್ಮೋನಿಯಂ, ತಬಲಾ ಸೇರಿದಂತೆ ಬಹುತೇಕ ವಾದ್ಯ ನುಡಿಸುವುದರಲ್ಲಿ ನಿಷ್ಣಾತ! ಆದರೆ, ಪ್ರೋತ್ಸಾಹ ಕೊರತೆಯ ಹಿನ್ನೆಲೆಯಲ್ಲಿ ಬೀದಿ ಬದಿಯಲ್ಲೇ ಕರೋಕೆ ಹಾಡುವ ಮೂಲಕ ತನ್ನ ಬದುಕಿನ ಬಂಡಿ ಮುನ್ನಡೆಸುತ್ತಿದ್ದಾರೆ.
ಗಾಯಕ ಸುಲೇಮಾನ್, ಅಂಧ ಯುವತಿಯನ್ನೇ ವಿವಾಹವಾಗಿದ್ದು, ಈಗ ಹತ್ತು ತಿಂಗಳ ಮಗುವಿದೆ. ಜನರು ನೀಡುವ 5, 10 ರೂ.ಗಳೇ ಜೀವನಾಧಾರ. ಒಟ್ಟಿನಲ್ಲಿ ಈ ಬಡ ಅಂಧ ಕಲಾವಿದನ ಪ್ರತಿಭೆಯನ್ನು ಸರಕಾರ, ದಾನಿಗಳು, ಜನಪ್ರತಿನಿಧಿಗಳು ಗುರುತಿಸಿ, ಕುಟುಂಬಕ್ಕೆ ನೆರವು ನೀಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/06/2022 09:18 pm