ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸರ್ಕಾರಿ ನೌಕರಿ ಇದ್ದರೂ ತಾಯಿಯನ್ನು ಬೀದಿಗೆ ತಳ್ಳಿದ ಮಗ

ಧಾರವಾಡ: ಸರ್ಕಾರಿ ನೌಕರಿ ಇದ್ದರೂ ತಾಯಿಯ ಹೆಸರಿನಲ್ಲಿದ್ದ ಎಲ್ಲಾ ಆಸ್ತಿಯನ್ನು ತನ್ನ ವಶಕ್ಕೆ ಪಡೆದ ಮಗ, ಕೊನೆಗೆ ತಾಯಿಯನ್ನು ಬೀದಿಗೆ ತಳ್ಳಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಖಾನಪೇಟ ಗ್ರಾಮದಲ್ಲಿ ನಡೆದಿದ್ದು, ಇದೀಗ ತನಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ತಾಯಿ ಬಸವಣ್ಣೆವ್ವ ಗುರುಪಾದಪ್ಪ ಕೋರಿಶೆಟ್ಟರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾಳೆ.

ಹೌದು! ಹೀಗೆ ದೃಶ್ಯದಲ್ಲಿ ಕಾಣುತ್ತಿರುವ ಇಳಿ ವಯಸ್ಸಿನ ತಾಯಿಯ ಹೆಸರು ಬಸವಣ್ಣೆವ್ವ. ತನಗಿದ್ದ ಎರಡು ಎಕರೆ ಹೊಲವನ್ನು ಮಗ ಮಾರಿಕೊಂಡು ಹೋಗಿದ್ದರಿಂದ ದಿಕ್ಕು ತೋಚದಂತೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಾಳೆ. ಧಾರವಾಡದ ಅಂಕಿ ಸಂಖ್ಯೆ ವಿಭಾಗದಲ್ಲಿ ಕೆಲಸ ಮಾಡಿ ಇದೀಗ ನಿವೃತ್ತಿಯಾಗಿರುವ ಶಿಂಗಪ್ಪ ಗುರುಪಾದಪ್ಪ ಕೋರಿಶೆಟ್ಟರ ಎಂಬುವವರೇ ಬಸವಣ್ಣೆವ್ವ ಅವರ ಹೊಲವನ್ನು ಮಾರಿ ಹಣ ಪಡೆದು, ತಾಯಿಯನ್ನು ಬೀದಿಗೆ ತಳ್ಳಿ ಹೋಗಿದ್ದಾನೆ. ಈ ಸಂಬಂಧ ಬಸವಣ್ಣೆವ್ವ ಬೆಳಗಾವಿಯ ಕನ್ನಡತಿ ಎಂಬ ಸೇವಾ ಸಂಸ್ಥೆಯ ಮೊರೆ ಹೋಗಿದ್ದಳು. ಸಂಸ್ಥೆಯವರು ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದರು.

ಶಿಂಗಪ್ಪ ಕೋರಿಶೆಟ್ಟರ್ ಧಾರವಾಡದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವುದರಿಂದ ಇದೀಗ ಬಸವಣ್ಣೆವ್ವ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬಂದು ತನಗೆ ನ್ಯಾಯ ಕೊಡಿಸುವಂತೆ ಮೊರೆ ಇಟ್ಟಿದ್ದಾಳೆ.

ಶಿಂಗಪ್ಪನಿಗೆ ಬಸವಣ್ಣೆವ್ವ ಎರಡನೇ ತಾಯಿಯಾಗಿದ್ದಾಳೆ. ಹೀಗಾಗಿ ಆತ ಆಕೆಯ ಹೆಸರಲ್ಲಿದ್ದ ಹೊಲವನ್ನು ಮಾರಿ ಎರಡೂವರೆ ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿದ್ದಲ್ಲದೇ ಇದ್ದ ಮನೆಯನ್ನೂ ಬೀಳಿಸಿ ಹೋಗಿದ್ದಾನೆ.

ಏನೇ ಆಗಲಿ ಎರಡನೇ ತಾಯಿ ಎಂಬ ಕಾರಣಕ್ಕೆ ಈ ರೀತಿ ಅನ್ಯಾಯಕ್ಕೊಳಗಾಗಿ ಕಂಡ ಕಂಡಲ್ಲಿ ಊಟ ಮಾಡಿ, ಅವರಿವರ ಮನೆಯಲ್ಲಿ ಆಶ್ರಯ ಪಡೆಯುತ್ತಿರುವ ಈ ವಯೋವೃದ್ಧೆಗೆ ನ್ಯಾಯ ಸಿಗಲೇಬೇಕಾಗಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/02/2022 06:27 pm

Cinque Terre

110.78 K

Cinque Terre

19

ಸಂಬಂಧಿತ ಸುದ್ದಿ