ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹುಬ್ಬಳ್ಳಿ ಹುಡುಗನ ಹೆಸರು

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಆತ ಪುಟ್ಟ ಪೋರ ಇನ್ನೂ ಮೂರು ವರ್ಷ ವಯಸ್ಸು ಆಗಿಲ್ಲ. ಆದ್ರೂ ಸಹ ಇಂಡಿಯಾ ಬುಕ್ ಆಪ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ್ದಾನೆ.

ಸದ್ಯ ಬಾಲಕನ ಜ್ಞಾಪಕ ಶಕ್ತಿಗೆ ಹುಬ್ಬಳ್ಳಿ ಮಂದಿ ಫಿದಾ ಆಗಿದ್ದಾರೆ. ಅಷ್ಟಕ್ಕೂ ಆತನ ಸ್ಟೈಲ್ ಆ್ಯಂಡ್ ಟ್ಯಾಲೆಂಟ್ ಹೇಗಿದೆ ಅನ್ನೊದನ್ನಾ ತೋರಸ್ತಿವಿ ನೋಡಿ....

ಹೀಗೆ ಪಟಪಟನೆ ಮಾತಾನಾಡುತ್ತಿರುವ ಈ ಪುಟ್ಟ ಪೋರನ ಹೆಸರು ಸಮೃದ್ದ. ಹುಬ್ಬಳ್ಳಿಯ ಕೋಟಿಲಿಂಗೇಶ್ವರ ನಗರದ ನಿವಾಸಿ ಶ್ರೀಕಾಂತ್ ಚಾರುಲತಾ ಶೆಟ್ಟಿ ಅವರ ಮುದ್ದಿನ ಮಗ.

ಚಿಕ್ಕ ವಯಸ್ಸಿನಲ್ಲೇ ತನ್ನ ಜ್ಞಾಪಕ ಶಕ್ತಿಗೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಈತನ ಟ್ಯಾಲೆಂಟ್ ಎಲ್ಲರಿಗೂ ತೋರಸಲು ಪೋಷಕರು ಇಂಡಿಯಾ ಬುಕ್ ಆಫ್ ರಿಕಾರ್ಡಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಿದ್ದರು.

ಲಕ್ಷಾಂತರ ಸ್ಪರ್ಧಿಗಳಲ್ಲಿ ಈತನ ಟ್ಯಾಲೆಂಟ್ ಮೆಚ್ಚಿದ ಇಂಡಿಯಾ ಬುಕ್ ಆಫ್ ರಿಕಾರ್ಡನಲ್ಲಿ ಹೆಸರ ನೋಂದಣಿ ಮಾಡಿ. ಇದೇ ಜನವರಿ 4 ರಂದು ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ತುಂಟ ಆಗಿರುವ ಸಮೃದ್ದ ಟ್ಯಾಲೆಂಟ್ ನೋಡಿದ ಕುಟುಂಬಸ್ಥರು ಹಂತಹಂತವಾಗಿ ಎಲ್ಲವನ್ನೂ ಕಲಿಸುತ್ತಾ ಬಂದಿದ್ದಾರೆ. ಎರಡುವರೇ ವಯಸ್ಸಿನಲ್ಲೇ ಇಂಗ್ಲಿಷ್ ಪದ ಬಳಕೆ, ನದಿಗಳ ಹೆಸರು, ಇಂಗ್ಲೀಷನಲ್ಲಿ ಹಾಗೂ ಕನ್ನಡದಲ್ಲಿ ತಿಂಗಳು, ದೇಶ ಹಾಗೂ ರಾಜ್ಯದ ರಾಜಕೀಯ ವ್ಯಕ್ತಿಗಳ ಹೆಸರು, ಪ್ರಾಣಿ, ಪಕ್ಷಿ, ಹಣ್ಣು, ಹಾಗೂ ದೇಶದಲ್ಲಿರುವ ಅತ್ಯುನ್ನತ ಹೆಸರು ಸೇರಿದಂತೆ ಎಲ್ಲವನ್ನೂ ಸಲಿಸಾಗಿ ಹೇಳುವ ಈತನಿಗೆ, ಇನ್ನೊಂದು ಅತ್ಯುತ್ತಮ ಪ್ರತಿಭೆ ಇದೆ. ಅದುವೇ ಯೋಗ.

ಬರೋಬ್ಬರಿ ಹದಿನೈದು ಆಸನಗಳನ್ನು ಮಾಡುವ ಮೂಲಕ ಈತ ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದಾನೆ. ಸಧ್ಯ ಈತನ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ ಪ್ರಶಸ್ತಿ ನೀಡಿ ಗೌರವಿಸಿದ್ದು ಕುಟುಂಬಸ್ಥರಲ್ಲಿ ಸಂತಸ ತಂದಿದೆ.

ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲೇ ತನ್ನ ವಿಭಿನ್ನ ಟ್ಯಾಲೆಂಟ್ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಸಮೃದ್ದ ಶ್ರೀಕಾಂತ್ ಶೆಟ್ಟಿ ಸಾಧನೆ ಹೀಗೆ ಮುಂದುವರೆಯಲಿ ಎನ್ನುವುದೇ ನಮ್ಮ ಆಶಯ.

Edited By : Manjunath H D
Kshetra Samachara

Kshetra Samachara

30/01/2022 09:01 pm

Cinque Terre

91.09 K

Cinque Terre

31

ಸಂಬಂಧಿತ ಸುದ್ದಿ