ಕುಂದಗೋಳ : ಶಾಲೆ, ಹೋಂ ವರ್ಕ್, ಆನ್ಲೈನ್ ಕ್ಲಾಸ್, ಟ್ಯೂಶನ್, ಸ್ಟಡಿ ಪ್ಲ್ಯಾನ್, ಎನ್ನುವ ಶಬ್ದಗಳು ಹಿಂದೆ ಓಡುವ ಮಕ್ಕಳ ನಡುವೆ ಇಲ್ಲೋಂದು ಊರಿನ ಮಕ್ಕಳು ಹಲೇ, ಹೈ, ಹೋ,ಹೋ ಬಾ, ಏ,. ಬಾ ಎನ್ನುವ ಶಬ್ಧಗಳನ್ನು ಬೆನ್ನಟ್ಟಿ ರೈತನ ಮಕ್ಕಳು ರೈತನ ಹಾದಿಯನ್ನೇ ತುಳಿಯುತ್ತಿದ್ದಾರೆ.
ಆಧುನಿಕತೆ ಬೆಳೆದಂತೆ ಶೈಕ್ಷಣಿಕ ಪ್ರಗತಿ ಏಳ್ಗೆ ಆಗುತ್ತಿದೆ, ಆದ್ರೇ ಕೃಷಿ ಕ್ಷೇತ್ರ ಮೌಲ್ಯ ಕಳೆದು ಕೊಳ್ಳುತ್ತಿದೆ. ಇದೀಗ ಅನ್ನದಾತನ ಮಕ್ಕಳು ಹಗಲೆಲ್ಲಾ ಸರ್ಕಾರಿ ಶಾಲೆಯಲ್ಲಿ ಓದಿ ಶಾಲೆ ಬಿಟ್ಟ ನಂತರ ಈ ತರಹ ಮರಿ ಹೋರಿಗಳನ್ನು ಸಾಗ ಮಾಡುತ್ತಿದ್ದಾರೆ.
ಯರಿನಾರಾಯಣಪುರ ಗ್ರಾಮದ ಮಕ್ಕಳು ತಮ್ಮ ತಮ್ಮ ಸ್ನೇಹಿತರ ಮನೆಯಲ್ಲಿನ ಹೋರಿ ಕರುಗಳನ್ನು ತಳ್ಳುವ ಗಾಡಿಗೆ ನೊಗ ಕಟ್ಟಿ, ಮರಿ ಹೋರಿ ಕರುಗಳ ಮೂಲಕ ಸಂತಸದಿಂದ ತಮ್ಮ ಮನಸ್ಸು ಬಿಚ್ಚಿ ಕರುಗಳನ್ನು ಸಾಗ ಮಾಡುವ ತಮ್ಮ ಕಾಯಕದಲ್ಲೇ ತಲ್ಲೀನರಾಗಿದ್ದಾರೆ.
ತಮ್ಮ ಕೃಷಿ ಕಾಯಕಕ್ಕೆ ಉಪಯುಕ್ತವಾಗಲೂ ಈ ಇಳಿ ವಯಸ್ಸಿನಲ್ಲೇ ಶಾಲೆ ಕಲಿತು ಬಂದೂ, ಕೃಷಿ ಕಾಯಕದ ಚಟುವಟಿಕೆ ತಿಳಿಯುತ್ತಿರುವ ಮಕ್ಕಳನ್ನು ನೋಡಿ ಅದೆಷ್ಟೋ ದಾರಿ ಹೋಕ ರೈತರು ಬೇಷ್ ಲೇ ಬೇಷ್ ಎಂಬ ಹಾರೈಕೆ ಸಹ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2022 10:58 am