ಕುಂದಗೋಳ : ಇಲ್ಲೊಂದು ಗ್ರಾಮ ಪಂಚಾಯಿತಿ ಸದಸ್ಯರು ಅನಾಥನಾಗಿ ಬಂದು ತಮ್ಮೂರಿನಲ್ಲಿ ವಾಸವಾಗಿದ್ದ ಬಿಹಾರಿ ಮೂಲದ ವ್ಯಕ್ತಿಗೆ ಆರು ವರ್ಷ ಅನ್ನ ನೀರು ಕೊಟ್ಟು ಸಲಿಹಿದ್ದಲ್ಲದೆ, ಆತನ ನಿಧನದ ಬಳಿಕ ಅಂತ್ಯಕ್ರಿಯೆ ಸಹ ನೇರವೇರಿಸಿ ಪರೋಪಕಾರದ ಸೇವೆ ಗೈದಿದ್ದಾರೆ.
ಹೌದು ! ಕುಂದಗೋಳ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಶರೇವಾಡ ಗ್ರಾಮದ ಗ್ರಾಮ ಅಧ್ಯಕ್ಷ ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಇಂತಹ ಪರೋಪಕಾರದ ಕಾರ್ಯ ಮಾಡಿ ಜನರಿಂದ ಅಷ್ಟೇ ಅಲ್ಲಾ ತಮ್ಮ ಆತ್ಮ ಸಾಕ್ಷಿ ಕೂಡಾ ಸೈ ಎನ್ನುವ ಸೇವೆ ಮಾಡಿದ್ದಾರೆ.
ಕಳೆದ ಆರು ವರ್ಷಗಳಿಂದ ಶರೇವಾಡ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಾಸವಿದ್ದ ಬಿಹಾರಿ ಮೂಲದ ವ್ಯಕ್ತಿ ಇಂದು ಬೆಳಿಗ್ಗೆ ಸಹಜವಾಗಿ ಸಾವನ್ನಪ್ಪಿದ್ದಾನೆ.
ತಕ್ಷಣ ವಿಷಯ ತಿಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಸ್ಯರು ಮೃತ ವ್ಯಕ್ತಿಗೆ ಗ್ರಾಮಸ್ಥರು ಸಮ್ಮಖದಲ್ಲಿ ಶವ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿ ಶರೇವಾಡ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.
Kshetra Samachara
22/11/2021 07:02 pm