ಹುಬ್ಬಳ್ಳಿ: ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ನೇಕ್ ಸಂಗಮೇಶ ಆಸ್ಪತ್ರೆಯಿಂದಲೇ ನೇರವಾಗಿ ಆಗಮಿಸಿ ಹಾವು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು.. ಹುಬ್ಬಳ್ಳಿಯ ಲಕ್ಷ್ಮೀನಗರದ ಬಸವರಾಜ ಎಂಬುವವರ ಮನೆಯಲ್ಲಿ ಹಾವು ಬಂದಿದ್ದು, ಆತಂಕಗೊಂಡ ಮನೆಯವರು ಸ್ನೇಕ್ ಸಂಗಮೇಶ ಅವರಿಗೆ ಕರೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಯಿಂದಲೇ ನೇರವಾಗಿ ಬಸವರಾಜ ಅವರ ಮನೆಗೆ ಆಗಮಿಸಿದ ಸ್ನೇಕ್ ಸಂಗಮೇಶ ಹಾವನ್ನು ರಕ್ಷಣೆ ಮಾಡುವ ಮೂಲಕ ಮನೆಯವರ ಆತಂಕ ದೂರ ಮಾಡಿದ್ದಾರೆ. ಅಲ್ಲದೇ ಹಾವನ್ನು ಕಾಡಿಗೆ ಬಿಡುವ ಮೂಲಕ ಅನಾರೋಗ್ಯದ ಸಂದರ್ಭದಲ್ಲಿ ಕೂಡ ಪ್ರಾಣಿ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
Kshetra Samachara
10/11/2021 01:29 pm