ಧಾರವಾಡ: ಬೃಹತ್ ರಾಷ್ಟ್ರ ಧ್ವಜ ಬುಕ್ ಆಫ್ ರೆಕಾರ್ಡ್ ದಾಖಲೆ ಸೇರಿದೆ.ಅತಿ ಉದ್ದದ ಈ ರಾಷ್ಟ್ರ ಧ್ವಜವನ್ನ ಸ್ವಾತಂತ್ರೊತ್ಸದಂದು ಬೃಹತ್ ರ‍್ಯಾಲಿ ಮೂಲಕ ಕಲಘಟಗಿಯಲ್ಲಿ ಆಗಸ್ಟ್-15 ರಂದು ಇಲ್ಲಿ ಪ್ರದರ್ಶಿಸಲಾಗಿತ್ತು.
35 ಕೆಜಿ ತೂಕದ 2.ಕಿ.ಮೀ ಉದ್ದದ ಮತ್ತು 3 ಮೀಟರ್ ಅಗಲದ ಈ ರಾಷ್ಟ್ರಧ್ವಜವನ್ನ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯ ಕಲ್ಯಾಣ್ ಟೆಕ್ಸ್ ಟೈಲ್ ನಲ್ಲಿ ತಯಾರಿಸಲಾಗಿತ್ತು. ಕಲಘಟಗಿಯಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಈ ಧ್ವಜ ಪ್ರದರ್ಶಿಸಲಾಗಿತ್ತು. ಈಗ ಇದೇ ಬೃಹತ್ ರಾಷ್ಟ್ರ ಧ್ವಜಕ್ಕೆ ಈಗ ಬುಕ್ ಆಫ್ ರೆಕಾರ್ಡ್ ದಾಖಲೆ ಗರಿ ಸಂದಿದೆ.
Kshetra Samachara
25/10/2021 03:18 pm