ಧಾರವಾಡ : ಪಾಲಿಕೆ ಮತದಾನಕ್ಕೆ ಬೆಳಿಗ್ಗೆಯಿಂದ ಕೊಂಚ ಮತದಾರರ ಕೊರತೆ ಕಾಣುತ್ತಿದೆ. ಇಂತಹ ಸಂಧರ್ಭದಲ್ಲೂ ಎಂಬತ್ತಾರು ವರ್ಷ ವಯಸ್ಸಿನ ಅಜ್ಜಿ ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಧಾರವಾಡದ ಕರ್ನಾಟಕ ಕಾಲೇಜಿನ ಬಿಬಿಎ ವಿಭಾಗದಲ್ಲಿನ ಮತಗಟ್ಟೆಗೆ ಆಗಮಿಸಿದ ಅಜ್ಜಿಗೆ ಇನ್ನೊಬ್ಬರ ಆಸರೆ ಇಲ್ಲದೇ ನಡೆಯಲಾಗದು, ಇಂತಹ ಪರಿಸ್ಥಿತಿಯಲ್ಲೂ ಮತಗಟ್ಟೆಗೆ ಬಂದು ಮತದಾನ ಮಾಡಿದ ಎಂಬತ್ತಾರು ವರ್ಷ ವಯಸ್ಸಿನ ಪದ್ಮಾಬಾಯಿ ಆಂಬೊರೆ ಎಂಬ ವೃದ್ದೆ ಈಗ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Kshetra Samachara
03/09/2021 03:47 pm