ಕುಂದಗೋಳ : ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಮಟ್ಟದ ಸಣ್ಣ ಸಣ್ಣ ಉದ್ಯಮಗಳನ್ನು ಬಲಿಷ್ಠ ಪಡಿಸಲು ಹಲವಾರು ಸಹಾಯಧನದ ಯೋಜನೆ ಜಾರಿಗೆ ತಂದಿದ್ದರೂ ಗ್ರಾಮೀಣ ಮಟ್ಟದ ಮಹಿಳೆಯರಿಗೆ ಅವುಗಳ ಅರಿವು ದೊರೆಯುತ್ತಿಲ್ಲ, ಹೀಗಾಗಿ ಈ ಕಾರ್ಯಗಾರದಲ್ಲಿ ಎಲ್ಲ ಸೌಲಭ್ಯಗಳ ಅರಿವು ನಿಮಗೆ ನೀಡಲಾಗುವುದೆಂದು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಪಕ್ಕಿರೇಶ ಬಾಳಿಕಾಯಿ ಹೇಳಿದರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ 2020-21 ಸಾಲಿನ ಪರಿಶಿಷ್ಟ ಪಂಗಡದ ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ ಸಾಲ ಸೌಲಭ್ಯ ಅರಿವು ಅವುಗಳನ್ನು ಪಡೆಯುವ ವಿಧಾನ ಸಲ್ಲಿಸಬೇಕಾದ ಅರ್ಜಿಗಳ ಬಗ್ಗೆ ಮಹಿಳೆಯರಿಗೆ ತಿಳಿಸಿದರು.
ಕಾರ್ಯಾಗಾರದಲ್ಲಿ 50 ಕ್ಕೂ ಅಧಿಕ ಸ್ತ್ರೀ ಶಕ್ತಿ ಗುಂಪುಗಳ ಪರಿಶಿಷ್ಟ ಪಂಗಡದ ಮಹಿಳೆಯರು ಭಾಗವಹಿಸಿ ಜ್ಞಾನ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಿಡಿಪಿಓ ಅನ್ನಪೂರ್ಣ ಸಂಗಳದ, ಹಾಗೂ ಇಲಾಖೆ ಇತರ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
20/02/2021 06:36 pm