ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಕಾನೂನು ಅರಿವು ಕುರಿತು ಬೀದಿ ನಾಟಕ

ನವಲಗುಂದ : ತಾಲೂಕ ಆಡಳಿತ, ತಾಲೂಕ ಪಂಚಾಯತ್, ಪಟ್ಟಣ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ನವಲಗುಂದ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಕಾನೂನು ಅರಿವು ಕುರಿತು ಬೀದಿ ನಾಟಕವನ್ನು ನವಲಗುಂದದ ಗಾಂಧಿ ಮಾರುಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇನ್ನು ಈ ಬೀದಿ ನಾಟಕ ಕಾರ್ಯಕ್ರಮವನ್ನು ನವಲಗುಂದ ತಹಶೀಲ್ದಾರ್ ನವೀನ ಹುಲ್ಲೂರ ಅವರು ಚಾಲನೆ ನೀಡಿದ್ದು, ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಕಪಿಲಾ ಎಲೂವಗಿ ಹಾಗೂ ವೈ. ಎ ನಾಗಮ್ಮನವರ, ಬ್ಯಾಡಗಿ, ಕುಂದರಗಿ, ಸಂಗಮೇಶ ದೊಡ್ಡಮನಿ ಸೇರಿದಂತೆ ಸಮುದಾಯದ ಮುಖಂಡರು ಹಿರಿಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

11/02/2021 07:34 pm

Cinque Terre

19.58 K

Cinque Terre

0

ಸಂಬಂಧಿತ ಸುದ್ದಿ