ಪಬ್ಲಿಕ್ ನೆಕ್ಸ್ಟ್ ವಿಶೇಷ-ಈರಣ್ಣ ವಾಲಿಕಾರ
ಹುಬ್ಬಳ್ಳಿ- ಈಗಿನ ಕಾಲದ ಬಹುಪಾಲು ಯುವಕರು ಇಂಟರ್ನೆಟ್, ಮೊಬೈಲ್ ಗೇಮ್ ಹೀಗೆ ಹಲವಾರು ರೀತಿಯಲ್ಲಿ ಸಮಯವನ್ನು ವ್ಯರ್ಥ ಮಾಡುತ್ತಿರುವವರಲ್ಲಿ ಇಲ್ಲೊಬ್ಬ 19 ರ ಪೋರ, ಸ್ಕಿಪ್ಪಿಂಗ್ ಮೂಲಕ ಎಲ್ಲರನ್ನು ಹುಬ್ಬೇರಿಸುವಂತ ಸಾಧನೆ ಮಾಡುತ್ತಿದ್ದಾನೆ. ಅಷ್ಟಕ್ಕೂ ಆತ ಮಾಡುವ ಸ್ಕಿಪ್ಪಿಂಗ್ ಹೇಗಿದೆ ಎಂಬುದನ್ನು ನಾವು ತೋರಿಸ್ತೀವಿ ನೋಡಿ....
ಹೀಗೇ ವಿಭಿನ್ನವಾಗಿ ಸ್ಕಿಪ್ಪಿಂಗ್ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಗಳಿಸಿರುವ ಯುವಕನ ಹೆಸರು' ಅಭಿಷೇಕ್ ಪವಾರ್. ಮೂಲತಃ ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಗ್ರಾಮದ ನಿವಾಸಿ, ಕಳೆದ ಆರು ವರ್ಷಗಳಿಂದ ಸ್ಪೋರ್ಟ್ಸ್ ನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಛಲ ಹೊಂದಿದ ಈತನಿಗೆ, ಒಲಿದ ಕ್ರೀಡೆ ಅದುವೇ ಸ್ಕಿಪ್ಪಿಂಗ್.
ಸ್ಕಿಪ್ಪಿಂಗ್ ಅಂದ ತಕ್ಷಣವೇ ನನಗೂ ಬರುತ್ತೆ ಎಂಬುದು ಸಾಮಾನ್ಯ. ಆದ್ರೆ ಸ್ಕಿಪ್ಪಿಂಗ್ ನಲ್ಲಿ ವಿಭಿನ್ನವಾಗಿ ಆಡುವುದರ ಮೂಲಕ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಲ್ಲದೆ. ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ಕಡಿಮೆ ಅವದಿಯಲ್ಲಿ, ಹೆಚ್ಚು ಜಂಪಿಂಗ್ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಲ್ಲಿ ತನ್ನ ಹೆಸರು ಗಿಟ್ಟಿಸಿಕೊಂಡು ಗಿನ್ನಿಸ್ ರೆಕಾರ್ಡ್ ಮಾಡಲು ತಯಾರಾಗಿದ್ದಾನೆ...
ಇನ್ನೂ ಅಭಿಷೇಕ ಸ್ಕಿಪ್ಪಿಂಗ್ ನಲ್ಲಿ ಪುದುಚೇರಿ, ಶಿರಡಿ, ಹನುಮಸಾಗರ, ಜಮ್ಮುಕಾಶೀರ, ತಮಿಳುನಾಡು, ಕಟ್ಮಂಡು ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಚಿನ್ನ ಹಾಗೂ ಬೆಳ್ಳಿ ಪದಕ ಗಳಿಸಿದ್ದಾನೆ. ಈತ ಮಾಡುವ ಡಬಲ್ ಅಂಡರ್, ಡಬಲ್ ಡಚ್, ಫ್ರೀ ಸ್ಟೈಲ್, ತ್ರಿ ಬಲ್ ಅಂಡರ್ ನಲ್ಲಿ ಸಾಧನೆ ಮಾಡಿದ್ದಾನೆ.
ಇನ್ನು ವಿದ್ಯಾಭ್ಯಾಸದ ಜೊತೆಗೆ ಸ್ಕಿಪ್ಪಿಂಗ್ ತರಬೇತಿ ಪಡೆದ ಈತ, ಇನ್ನೂ ಹೆಚ್ಚು ಸಾಧನೆ ಮಾಡಬೇಕು ಎಂದಾಗ, ಮರಾಠಾ ಸಮಾಜದ ನಾಯಕರು ಈತನಿಗೆ ಸಹಾಯಹಸ್ತ ಚಾಚಿ ಮುಂದಿನ ಗುರಿಗೆ ಸಾಥ್ ನೀಡಿದ್ದು ಆದಷ್ಟು ಬೇಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದ್ದಾರೆ....
ಒಟ್ಟಿನಲ್ಲಿ ಸ್ಕಿಪ್ಪಿಂಗ್ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಹುಬ್ಬಳ್ಳಿ ಹುಡುಗನ ಸಾಧನೆ, ಇನ್ನಷ್ಟು ಉತ್ತುಂಗಕ್ಕೆ ಏರಿ ದೇಶದ ಕೀರ್ತಿ ಪತಾಕೆ ಹಾರಿಸಲಿ ಎಂಬುದು ಎಲ್ಲರ ಆಶಯ...!
Kshetra Samachara
23/01/2021 11:06 am