ಕುಂದಗೋಳ : ಗೆಳೆತನ, ದೋಸ್ತಿ ನಡುವೆ ಸಣ್ಣ ಮಾತಿಗೂ ಮುಂಗೋಪ ತೋರಿ ಸ್ನೇಹವನ್ನು ದೂರ ಮಾಡುವವರ ನಡುವೆ, ಒಡಹುಟ್ಟಿದವರೇ ತಮ್ಮವರನ್ನು ದೂರಮಾಡಿ ಬದುಕು ಸಾಗಿಸುವ ಈ ದಿನಗಳಲ್ಲಿ ಇಲ್ಲೋಂದು ಗೆಳೆಯರ ಬಳಗ ತಮ್ಮ ಸ್ನೇಹಿತನ ಅಗಲಿಕೆಗೆ ಕಂಬನಿ ಮಿಡಿದು ಸಹಾಯಹಸ್ತ ಚಾಚಿದೆ.
ಹೌದು ! ಕಳೆದ ವರ್ಷದ ಕೊರೊನಾ ಕಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಸಂಶಿ ಗ್ರಾಮದ ಕಟ್ಟಡ ಕಾರ್ಮಿಕ ಜುಂಜಪ್ಪ ಚಲವಾದಿ ಕೆಲವೇ ದಿನಗಳಲ್ಲಿ ಅಕಾಲಿಕ ಮರಣಕ್ಕೆ ಇಡಾದರು. ಆ ಬಳಿಕ ಕುಟುಂಬಕ್ಕೆ ಆಧಾರವಾಗಿದ್ದ ಜುಂಜಪ್ಪನನ್ನು ಕಳೆದುಕೊಂಡು ಕಷ್ಟದಲ್ಲೇ ಆರ್ಥಿಕ ಪರಿಸ್ಥಿತಿ ನೂಕುತ್ತಿದ್ದ ಆತನ ಮನೆಯವರಿಗೆ ಜುಂಜಪ್ಪ 1996-97ನೇ ಸಾಲಿನಲ್ಲಿ ಕೂಡಿ ಕಲಿತ ಎಸ್.ಎಸ್.ಎಲ್.ಸಿ ಸ್ನೇಹಿತರು ಬಳಗದವರು ಒಡಗೂಡಿ ತಮ್ಮ ಕೈಲಾದಷ್ಟು ಹಣ ಸೇರಿಸಿ ಜುಂಜಪ್ಪನ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಎಲ್ಲ ಸ್ನೇಹಿತರು ತಮ್ಮ ಕೈಲಾದಂತೆ ಹಣ ಸಂಗ್ರಹಿಸಿ ಜುಂಜಪ್ಪನ ಮಕ್ಕಳ ವಿದ್ಯಾಭ್ಯಾಸಕ್ಕೆ 25.000 ರೂಪಾಯಿ ನೆರವು ನೀಡಿದ್ದಾರೆ.
Kshetra Samachara
21/01/2021 03:07 pm