ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊರೊನಾ ವ್ಯಾಕ್ಸಿನ್ ಗೆ ಕಲೆಯ ಮೂಲಕ ಸ್ವಾಗತ

ಧಾರವಾಡ: ಜಗತ್ತಿನ ನಿದ್ದೆಗೆಡಿಸಿದ್ದ ಕೊರೊನಾ ಸೋಂಕಿಗೆ ಭಾರತದಲ್ಲೇ ಔಷಧಿ ಸಿದ್ಧವಾಗಿ ಕರ್ನಾಟಕಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಧಾರವಾಡದ ಕೆಲಗೇರಿಯ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ತಮ್ಮ ಕಲೆಯ ಮೂಲಕ ವ್ಯಾಕ್ಸಿನ್ ಗೆ ಸ್ವಾಗತ ಕೋರಿದ್ದಾರೆ.

ಮಣ್ಣಿನಿಂದ 6 ಇಂಚಿನ ಇಂಜೆಕ್ಷನ್ ಬಾಟಲಿಗಳನ್ನು ಸಿದ್ಧಪಡಿಸಿ ಅವುಗಳಿಗೆ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಎಂದು ಬರೆದು ಆ ಮೂಲಕ ಕೊರೊನಾ ಸೋಂಕಿಗೆ ರಾಮಬಾಣವಾಗಿರುವ ಈ ವ್ಯಾಕ್ಸಿನ್ ಗಳಿಗೆ ಸ್ವಾಗತ ಕೋರಿದ್ದಾರೆ.

ಕೊರೊನಾ ಸೋಂಕಿಗೆ ಭಾರತದ ಮಣ್ಣಲ್ಲೇ ದವಾಯಿ ಸಿದ್ಧವಾಗಿದ್ದು, ನಾವೆಲ್ಲರೂ ಹೆಮ್ಮೆಪಡುವಂತ ವಿಷಯವಾಗಿದೆ. ಹೀಗಾಗಿ ಔಷಧಿ ಸಿದ್ಧಪಡಿಸಲು ಶ್ರಮಿಸಿದ ವಿಜ್ಞಾನಿಗಳು, ವೈದ್ಯರು ಹಾಗೂ ಸರ್ಕಾರಕ್ಕೂ ಕಲಾವಿದ ಹಿರೇಮಠ ಧನ್ಯವಾದ ಸಲ್ಲಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

12/01/2021 12:22 pm

Cinque Terre

57.02 K

Cinque Terre

5

ಸಂಬಂಧಿತ ಸುದ್ದಿ