ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಜೊತೆಗೆ ಗಾನ ಗಾರುಡಿಗನ ಬಾಂಧವ್ಯ ಬೆಳೆಸಿದ ಕಾರ್ಯಕ್ರಮ ನೀವೆ ನೋಡ್ರಿ

ಹುಬ್ಬಳ್ಳಿ: ಗಾನ ಮುಗಿಸಿದ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡದೊಂದಿಗೆ ಯಾವ ರೀತಿಯ ನಂಟು ಬೆಸೆದುಕೊಂಡಿತ್ತೋ ಅದೇ ರೀತಿ ವಾಣಿಜ್ಯನಗರಿ ಹುಬ್ಬಳ್ಳಿಗೂ ಎಸ್.ಪಿ.ಬಿ ಅವರಿಗೂ ಅವಿನಾಭಾವ ಸಂಬಂಧವಿದೆ.

ಹೌದು...ಮೂಲತಃ ಕನ್ನಡಿಗ ಆಗದೇ ಇದ್ದರೂ ಕೂಡ ಕನ್ನಡದ ಅಭಿಮಾನ ಕನ್ನಡದಲ್ಲಿನ ಸಂಗೀತ ಪ್ರೇಮದಿಂದ ಕನ್ನಡಿಗರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದ್ದಾರೆ.ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಬಾಲಸುಬ್ರಹ್ಮಣ್ಯಂ ಅವರು ನನ್ನ ಮುಂದಿನ ಜನ್ಮ ಒಂದಿದ್ದರೇ ನಾನು ಕನ್ನಡಿಗನಾಗಿ ಹುಟ್ಟುತ್ತೇನೆ ಎಂಬುವಂತ ಮಾತು ಹುಬ್ಬಳ್ಳಿಯ ಜನತೆಯ ಹೃದಯ ಸ್ಪರ್ಶಿಯಾಗಿತ್ತು.

ಸುಮಾರು ಹದಿನಾರು ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಇನ್ನೂ ನೆನಪು ಮಾತ್ರ.ಸದಾ ಲವಲವಿಕೆಯ ವ್ಯಕ್ತಿತ್ವ ಎಂತಹವರನ್ನು ಕೂಡ ಮೂಕ ವಿಸ್ಮಿತರನ್ನಾಗಿಸುವ ಸಂಗೀತದ ಮಾಂತ್ರಿಕ ಎಸ್.ಪಿ.ಬಿ ಅವರಿಗೆ ಹುಬ್ಬಳ್ಳಿಯ ಸೊಬಗು ನಿಜಕ್ಕೂ ಅಚ್ಚು ಮೆಚ್ಚಾಗಿತ್ತು.

Edited By : Nagesh Gaonkar
Kshetra Samachara

Kshetra Samachara

25/09/2020 10:02 pm

Cinque Terre

61.62 K

Cinque Terre

7

ಸಂಬಂಧಿತ ಸುದ್ದಿ