ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಿವೃತ್ತಿಯಲ್ಲೂ ಪಾದಯಾತ್ರೆ ಕೈಗೊಂಡು ದಾಖಲೆ ಬರೆದ ಯೋಧ !

ಕುಂದಗೋಳ : ಆತ ಬಿ.ಎಸ್‌ಎಫ್ ಯೋಧ ಪಂಜಾಬ್ ನಲ್ಲಿ ತನ್ನ ವೃತ್ತಿ ಬದುಕನ್ನು ನಿರ್ವಹಿಸಿ ನಿವೃತ್ತಿ ಪಡೆದೂ ಸ್ವ ಗ್ರಾಮಕ್ಕೆ ಆಗಮಿಸಿ ನಿವೃತ್ತಿಯಲ್ಲೂ ದಾಖಲೆ ಬರೆದಿದ್ದಾರೆ.

ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಚಂದ್ರಶೇಖರ ಬಿಚ್ಚುಗತ್ತಿಯವರು ಹುಬ್ಬಳ್ಳಿ ರೇಲ್ವೆ ನಿಲ್ದಾಣದಿಂದ ತಮ್ಮೂರು ಸ್ವ ಗ್ರಾಮ ಚಾಕಲಬ್ಬಿವರೆಗೂ ಪಾದಯಾತ್ರೆ ಮಾಡುತ್ತಾ ತಲುಪಿ ನಾನೊಬ್ಬ ವೀರಯೋಧ ನಾನು ನಡೆದು ಬಂದ ಹಾದಿಯಲ್ಲಿ ನನ್ನನ್ನು ನೋಡಿದವರೆಲ್ಲಾ ದೇಶಸೇವೆಗೆ ತಯಾರಾಗಲು ಸ್ಪೂರ್ತಿ ತುಂಬಲು ಈ ಪಾದಯಾತ್ರೆ ಎಂದಿದ್ದಾರೆ.

ಯೋಧ ಕುಂದಗೋಳ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕಲ್ಯಾಣಪುರ ಬಸವಣ್ಣಜ್ಜನವರು, ಶಿವಾನಂದ ಮಠದ ಸ್ವಾಮಿಗಳು, ಯೋಧನನ್ನು ತಾಲೂಕಿಗೆ ಬರಮಾಡಿಕೊಂಡು ಸನ್ಮಾನ ಮಾಡಿ ಸ್ಮರಣಿಕೆ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಎಲ್ಲ ಯುವಕರು, ಚಾಕಲಬ್ಬಿ ಗ್ರಾಮಸ್ಥರು ಜೈ ಜವಾನ್ ಜೈ ಕಿಸಾನ್ ಘೋಷಣೆ ಕೂಗುತ್ತಾ ಯೋಧನಿಗೆ ಜೈಕಾರದ ಸುರಿಮಳೆ ಗೈದರು.

Edited By :
Kshetra Samachara

Kshetra Samachara

06/10/2020 07:07 pm

Cinque Terre

82.77 K

Cinque Terre

4

ಸಂಬಂಧಿತ ಸುದ್ದಿ