ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪ್ರಯಾಣಿಕರಿಗೆ ಜ್ಞಾನ ಹೆಚ್ಚಿಸಲು ನಿರ್ಮಾಣವಾಯಿತು ಸಾರ್ವಜನಿಕ ಗ್ರಂಥಾಲಯ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಸಾರ್ವಜನಿಕ ಗ್ರಂಥಾಲಯ ಜನಸಾಮಾನ್ಯರ ವಿಶ್ವವಿದ್ಯಾಲಯ ಎಂಬ ಮಾತಿದೆ. ಇದೇ ಆಶಯದೊಂದಿಗೆ ವಾಯುವ್ಯ ಸಾರಿಗೆ ವ್ಯಾಪ್ತಿಯಲ್ಲಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ನಿಲ್ದಾಣದಲ್ಲಿ ಪ್ರಯಾಣಿಕರ ಜ್ಞಾನ ಹೆಚ್ಚಿಸಲು ಗ್ರಂಥಾಲಯ ಮಾಡುವ ಮೂಲಕ ಪ್ರಯಾಣಿಕರಿಗೆ ಜ್ಞಾನ ಹೆಚ್ಚಿಸುವ ಕೆಲಸ ಮಾಡಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿ ಮೂಲಕ ವಿವಿಧ ಜಿಲ್ಲೆ, ರಾಜ್ಯಗಳಿಗೆ ಸಾವಿರಾರು ಜನರು ತಮ್ಮ ಪ್ರಯಾಣ ಬೆಳೆಸುತ್ತಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆ ಅಧಿಕಾರಿಗಳು, ಈಗ ಅವರಿಗೆ ಬಸ್ ಬರುವವರೆಗೂ ನಿಲ್ದಾಣದಲ್ಲಿ ಸಮಯದ ಜೊತೆಗೆ, ಜ್ಞಾನದ ಆಲಯವು ಹೆಚ್ಚು ಮಾಡಲಿಕ್ಕೆ ಸಾರ್ವಜನಿಕ ಗ್ರಂಥಾಲಯ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ರಾಜ್ಯದ ಕೆಲವು ಬಸ್‌ ನಿಲ್ದಾಣಗಳಲ್ಲಿ ಈಗಾಗಲೇ ಸಾರ್ವಜನಿಕ ಗ್ರಂಥಾಲಯ ತೆರೆಯಲಾಗಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಇದೇ ಮೊದಲು ಎನ್ನಬಹುದು, ಬಸ್‌ಗಾಗಿ ಕಾಯುವ ಸಮಯವನ್ನೆ ಜ್ಞಾನದ ಸಮಯವಾಗಿ ಬದಲಾಯಿಸಿದೆ.

ಇನ್ನೂ ಈ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ, ವಿವಿಧ ಸಾಧನೆಗೈದ ವೀರರ ಪುಸ್ತಕ, ಕಥೆ, ಕವನದಂತಹ ಪುಸ್ತಕಗಳನ್ನು ಇಡಲಾಗಿದೆ. ಓದುಗರ ಅನುಕೂಲಕ್ಕಾಗಿ ಆಸನದ ವ್ಯವಸ್ಥೆ ಮಾಡಿ ಈಗ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದೆ. ಒಟ್ಟಿನಲ್ಲಿ ಪ್ರಯಾಣಿಕರ ಜ್ಞಾನ ಹೆಚ್ಚಿಸಲು ನಿರ್ಮಿಸಿರುವ ಸಾರ್ವಜನಿಕ ಗ್ರಂಥಾಲಯ, ತಾತ್ಕಾಲಿಕವಾಗದೆ ಶಾಶ್ವತವಾಗಿರಲಿ ಎಂಬುದು ಎಲ್ಲರ ಒತ್ತಾಯ.

Edited By : Manjunath H D
Kshetra Samachara

Kshetra Samachara

08/12/2021 08:19 pm

Cinque Terre

70.07 K

Cinque Terre

5

ಸಂಬಂಧಿತ ಸುದ್ದಿ