ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಾಜಿ ಶಾಸಕರೆದುರು ಗಳಗಳನೇ ಅತ್ತ ಶಿಕ್ಷಕ

ಧಾರವಾಡ: ಕಳೆದ 20 ವರ್ಷಗಳಿಂದ ಅನುದಾನರಹಿತ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಕೇವಲ 6 ಸಾವಿರ ವೇತನ ಕೊಡುತ್ತಿದ್ದಾರೆ. ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಶಿಕ್ಷಕನೋರ್ವ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರೆದುರು ಗಳಗಳನೇ ಅತ್ತ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಹಿರೇಕೆರೂರು ತಾಲೂಕಿ ಹಂಸಭಾವಿ ಗ್ರಾಮದ ದುರ್ಗದ ಅನುದಾನರಹಿತ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಕ್ಬುಲ್ ಅಹ್ಮದ್ ಜಮಖಂಡಿ ಎಂಬ ಶಿಕ್ಷಕನೇ ಗಳಗಳನೇ ಅತ್ತು ತನ್ನ ಅಳಲು ತೋಡಿಕೊಂಡವರು.

20 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ ಕೇವಲ 6 ಸಾವಿರ ಮಾತ್ರ ವೇತನ ಕೊಡುತ್ತಾರೆ. ಮಕ್ಕಳು ಹತ್ತು ರೂಪಾಯಿ ಕೇಳಿದರೂ ಕೊಡಲು ನನ್ನ ಬಳಿ ಹಣ ಇರೋದಿಲ್ಲ ಎಂದು ಮಕ್ಬುಲ್ ಮಾಧ್ಯಮದ ಎದುರೂ ಗಳಗಳನೇ ಅತ್ತ ಪ್ರಸಂಗ ನಡೆಯಿತು.

ಇನ್ನು ಈ ಶಿಕ್ಷಕನ ಸಮಸ್ಯೆ ಆಲಿಸಿದ ಮಾಜಿ ಶಾಸಕ ಕೋನರಡ್ಡಿ, ಸರ್ಕಾರ ಶಿಕ್ಷಕರ ಕಣ್ಣಲ್ಲಿ ನೀರು ಹಾಕಿಸುವ ಕೆಲಸ ಮಾಡಬಾರದು ಎಂದರು.

ಸರ್ಕಾರ ಕೂಡಲೇ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರ ನೆರವಿಗೆ ಬರಬೇಕು ಎಂದು ಹೋರಾಟ ನಡೆಯುತ್ತಿದ್ದು, ಬರುವ ದಿನಗಳಲ್ಲಿ ಈ ಸಮಸ್ಯೆಯನ್ನು ಸರ್ಕಾರ ಹೇಗೆ ಬಗೆಹರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Edited By :
Kshetra Samachara

Kshetra Samachara

05/12/2020 04:02 pm

Cinque Terre

55.88 K

Cinque Terre

15

ಸಂಬಂಧಿತ ಸುದ್ದಿ