ಧಾರವಾಡ : ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ಕಠಿಣ ನಿರ್ಬಂಧಗಳನ್ನು ಹೇರದೆ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುವುಮಾಡಿ ಕಲಾವಿದರ ಕೈ ಹಿಡಿಯುವಂತೆ ಧಾರವಾಡದ ಕೆಲಗೇರಿಯ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ವರ್ಷ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕೇ ಸಿಗುತ್ತೆ ಎಂಬ ವಿಶ್ವಾಸದಿಂದ ಗಣೇಶೋತ್ಸವ ಮಂಡಳಿಯವರು ನಾಲ್ಕು ತಿಂಗಳಿನಿಂದಲೇ ವಿಗ್ರಹಗಳನ್ನು ಬುಕ್ ಮಾಡಿದ್ದಾರೆ. ನೀವು ಅನುಮತಿಗೆ ನಿರಾಕರಿಸಿದರೇ, ಮಂಡಳಿಯವರು ಅವುಗಳನ್ನು ಕ್ಯಾನ್ಸಲ್ ಮಾಡಿ ಬಿಡ್ತಾರೆ, ವರ್ಷ ಪೂರ್ತಿ ದುಡಿದ ಕಲಾವಿದರ ಗತಿ ಏನು, ಹೋದ ವರ್ಷ ಗಾಯವಾಗಿದೆ ಈ ವರ್ಷ ಅದರ ಮೇಲೆ ಬರೆ ಹಾಕಬೇಡಿ, ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ ಎಂದು ಕಲಾವಿದ ಮಂಜುನಾಥ್ ಹಿರೇಮಠ ಕಲಾವಿದರ ಪರವಾಗಿ ಅಳಲು ತೋಡಿಕೊಂಡಿದ್ದಾರೆ.
Kshetra Samachara
04/09/2021 11:03 am