ಪಬ್ಲಿಕ್ ನೆಕ್ಸ್ಟ್ ವಿಶೇಷ: ಈರಣ್ಣ ವಾಲಿಕಾರ
ಹುಬ್ಬಳ್ಳಿ- ಆಕೆ ಸಂಗೀತ ಲೋಕದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ, ಅವಳು ಹಾಡುತ್ತಿದ್ದರೇ ಎಲ್ಲರಿಂದಲು ಚಪ್ಪಾಳೆ ಸುರಿಮಳೆ, ಚಿಕ್ಕ ವಯಸ್ಸಿನಲ್ಲೇ ಸಂಗೀತದಲ್ಲಿ ಅತ್ಯುತ್ತಮ ಸಾಧನೆಗೈದು ಕರ್ನಾಟಕದ ಜನತೆಗೆ ಸಂಗೀತ ರಸದೌತಣ ಉಣಬಡಿಸುತ್ತಿದ್ದಾಳೆ. ಅಷ್ಟಕ್ಕೂ ಆ ಬಾಲಕಿ ಯಾರು ಅಂತಾ ತೊರಸ್ತೇವಿ ನೊಡಿ.
ಹೀಗೆ ಮುಗ್ದ ಕಂಠದಿಂದ ಕನ್ನಡ ಹಾಗೂ ಅನ್ಯ ಭಾಷೆ ಹಾಡುಗಳನ್ನು ಹಾಡಿತ್ತಿರುವ ಪುಟ್ಟ ಬಾಲಕಿ ಹೆಸರು, ರೇವತಿ ಅನಿಲಕುಮಾರ. ಮೂಲತಃ ಹುಬ್ಬಳ್ಳಿ ವಿದ್ಯಾ ನಗರದ ನಿವಾಸಿ. 9 ವರ್ಷದವಳಾದ ಇವಳು ಚಿಕ್ಕ ವಯಸ್ಸಿನಲ್ಲೆ ಸಂಗೀತದ ಬಗ್ಗೆ ಒಲವು ಕಂಡ ಕುಟುಂಬಸ್ಥರು, ಸಂಗೀತ ಕಲಿಯುವಂತೆ ಹಲವರು ಪ್ರೋತ್ಸಾಹ ನೀಡಿದ ಫಲದಿಂದ, ಸಧ್ಯ ಈಗ ತನ್ನ ಮುಗ್ದ ಕಂಠದಿಂದ ಎಲ್ಲಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾಳೆ. ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಹಲವಾರು ಸಂಗೀತ ಕಾರ್ಯಕ್ರಮ ನೀಡಿದ ರೇವತಿ. ತನ್ನ ಪ್ರತಿಭೆಯಿಂದ ಕನ್ನಡ ಹೆಸರಾಂತ ಖಾಸಗಿ ವಾಹಿನಿಯೊಂದರ 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ಮೋಡಿ ಹಾಡುವುದರ ಮೂಲಕ, ಖ್ಯಾತ ಕಾಮಿಡಿಕಿಂಗ್ ಸಂಗೀತ ಕಲಾವಲ್ಲಬ ಸಾಧುಕೋಕಿಲ್, ಚಂದನ್ ಶೆಟ್ಟಿ, ಅರ್ಚನಾ ತೀರ್ಪುಗಾರರಿಂದ ಸೈ ಎನಿಸಿಕೊಂಡಿದ್ದಾಳೆ. ಇನ್ನು ನೇರ ಮಾತುಗಳು ಹಾಗೂ ಕನ್ನಡದ ಸಿನಿಮಾದ ಡೈಲಾಗ್ ಹೇಳುವ ಸ್ಟೈಲ್ ಕನ್ನಡಿಗರ ಮನ ತಣಿಸಿರವುದಂತಿ ಸತ್ಯ!
ಇನ್ನು ರೇವತಿ ತಾಯಿ ಜ್ಯೋತಿ, ತಂದೆ ಅನಿಲಕುಮಾರ ಹವ್ಯಾಸಿ ಗಾಯಕರು. ಇದರಿಂದ ರೇವತಿಗೆ ಮತ್ತಷ್ಟು ಹಾಡು ಕಲಿಯುವುದಕ್ಕೆ ಅನಕೂಲದ ಜೊತೆಗೆ, ನಗರದ ಪಂಡಿತ ಶ್ರೀಕಾಂತ್ ಕುಲಕರ್ಣಿ ಅವರ ಸುಗಮ ಸಂಗೀತ, ಆನಂದ ದೇಸಾಯಿ, ತುಷಾರ್ ಸಿಂದೇ ಕ್ಲಾಸಿಕಲ್ ಕಲಿತು ಬಿಡುವಿನ ವೇಳೆ, ಮನೆಯಲ್ಲಿ ಮೊಬೈಲ್‌ನಲ್ಲಿ ಹಾಡುಗಳನ್ನು ಕೇಳುತ್ತ ಭಕ್ತಿಗೀತೆ, ಭಾವಗೀತೆ, ಜಾನಪದ ಹಾಡುಗಳನ್ನು ನಿರರ್ಗಳವಾಗಿ ಹಾಡುವ ಕಲೆಯನ್ನು ಹೊಂದಿರುವ ಈಕೆ, ಸಾಧನೆಗೆ ಹಲವಾರು ಪ್ರಶಸ್ತಿಗಳು ದೊರೆತಿರುವುದು ಹೆಮ್ಮೆಯ ಸಂಗತಿ.
ಒಟ್ಟಿನಲ್ಲಿ ಸಂಗೀತ ಲೋಕದಲ್ಲಿ ವಯಸ್ಸಿನಲ್ಲಿ ಮಿಂಚುತ್ತಿರುವ, ರೇವತಿ ಸಾಧನೆ ಇನ್ನಷ್ಟು ಉತ್ತುಂಗಕ್ಕೆ ಎರುವುದು ಕುಟುಂಬಸ್ಥರು ಹಾಗೂ ಕನ್ನಡಿಗರ ಅಭಿಲಾಷೆ....!
Kshetra Samachara
22/12/2020 06:30 pm