ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಿವೃತ್ತ ನೌಕರರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾದರೂ ಯಾಕೆ ನೀವೆ ನೋಡಿ....!

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ಸಿಬ್ಬಂದಿಗಳು ತಮ್ಮ ನ್ಯಾಯಕ್ಕಾಗಿ ರಸ್ತೆಗಿಳಿಯುವ ಸ್ಥಿತಿಗೆ ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರಿಗೆ ಸಿಗಬೇಕಿದ್ದ ಹಣವನ್ನು ನೀಡದೆ ಬಡ್ಡಿ ಸಮೇತ ಹಣ ಕೊಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರಿಗೆ ಸಿಗಬೇಕಾದ ಹಣ ಯಾವುದು..ಅವರೆಲ್ಲ ಎಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ ಅಂತ ನೀವೇ ನೋಡಿ

ಹೀಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎದುರೇ ಪ್ರತಿಭಟನೆ ನಡೆಸುತ್ತಿರುವ ಹಿರಿಯ ಜೀವಗಳು. ಎರಡು ವರ್ಷಗಳಿಂದ ನಮಗೆ ಸಿಗಬೇಕಾದ ಹಣ ಇಂದಿಗೂ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ನ್ಯಾಯ ಬೇಕು ಅಂತ ಪ್ರತಿಭಟನೆ.ಈ ಎಲ್ಲ ದೃಶ್ಯ ಕಂಡು ಬಂದಿದ್ದು ವಾಣಿಜ್ಯನಗರಿ ಹುಬ್ಬಳ್ಳಿಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಚೇರಿ ಮುಂಭಾಗದಲ್ಲಿ. ಇವೆರೆಲ್ಲ ಈಗಾಗಲೇ ತಮ್ಮ ವೃತ್ತಯಿಂದ ನಿವೃತ್ತಿ ಪಡೆದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಸ್ತರು.ಆದರೆ ಇವೆರೆಲ್ಲ ಹೀಗೆ ಪ್ರತಿಭಟಿಸೋಕೆ ಕಾರಣವೇ ಅವರಿಗೆ ಸಿಗಬೇಕಿದ್ದ ಗ್ರ್ಯಾಚುಟಿ ಹಣದ ಜೊತೆಗೆ ರಜೆ ನಗದಿಕರಣದ ಹಣವನ್ನ ಬಾಕಿ ಉಳಿಸಿಕೊಂಡಿದ್ದಕ್ಕೆ. ಹಣವನ್ನು ಆಗ ಕೊಡ್ತೀವಿ ಈಗ ಕೊಡ್ತೀವಿ ಅಂತ ನೆಪ ಹೇಳುತ್ತಿದ್ದಾರೆ ಅಂತ ಇವೆರೆಲ್ಲ ಅರ್ಜಿ ಕೊಟ್ಟು ಕೊಟ್ಟು ಸಾಕಾಗಿ ಈ ರೀತಿ ಪ್ರತಿಭಟನೆಗೆ ಮುಂದಾಗಿದ್ದಾರೆ..

ಈಗಾಗಲೇ KSRTC ಮತ್ತು ಈಶ್ಯಾನ್ಯ ಸಾರಿಗೆ ನೌಕರರಿಗೆ ಹಣವನ್ನ ನೀಡಿದ್ದು ನಮಗೆ ಯಾಕೆ ಇನ್ನೂ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ ಅಂತ ನಿವೃತ್ತ ನೌಕರರು ಆರೋಪಿಸಿದ್ದಾರೆ..ಈಗಾಗಲೇ 6 ಬಾರಿ ಮನವಿಯನ್ನು ಸಲ್ಲಿಸಿದ್ದು ಒಟ್ಟು 250ಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಹಣ ಬಿಡುಗಡೆಯಾಗಬೇಕಿದೆ..ಆದರೆ ಕುಂಟು ನೆಪವನ್ನು ಹೇಳುತ್ತಾ ಬರುತ್ತಿರುವ ವಾಯುವ್ಯ ರಸ್ತೆ ಸಾರಿಗೆ ಕೇವಲ ಅಶ್ವಾಸನೆಗಳನ್ನ ಮಾತ್ರ ನೀಡುತ್ತಿದಿಯೇ ವಿನಃ ನಮಗೆ ಹಣ ನೀಡುತ್ತಿಲ್ಲ ಅಂತ ಆರೋಪಿಸಿದ್ದಾರೆ..ಅಲ್ಲದೆ ಈಗಾಗಲೇ ಕೋವಿಡ್ ನಿಂದ ಹಲವಾರು ರೀತಿಯಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದು,ನಮಗೆ ಸಿಗಬೇಕಾದ ಹಣ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯೋದು ನಿಶ್ಚಿತ ಅಂತ ಎಚ್ಚರಿಕೆ ನೀಡಿದ್ದಾರೆ

ಒಟ್ಟಾರೆ 4 ರಿಂದ 5 ಜಿಲ್ಲೆಯ ನಿವೃತ್ತ ನೌಕರರು ಈ ಹಣವನ್ನ ಪಡೆಯಲಿದ್ದು, ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಇನ್ನಾದರೂ ನಿವೃತ್ತ ನೌಕರರ ಜೀವನಾಧಾರಕ್ಕೆ ಆಗುವ ಹಣವನ್ನ ಸಂದಾಯ ಮಾಡಿ ಅವರ ಕಷ್ಟಕ್ಕೆ ಸ್ಪಂಧಿಸಬೇಕಿದೆ.

Edited By : Manjunath H D
Kshetra Samachara

Kshetra Samachara

02/12/2020 12:25 pm

Cinque Terre

44.98 K

Cinque Terre

1

ಸಂಬಂಧಿತ ಸುದ್ದಿ