ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ
ನವಲಗುಂದ : ಗೌರಿ ಹುಣ್ಣಿಮೆ ಹೆಣ್ಣು ಮಕ್ಕಳ ಅಚ್ಚು ಮೆಚ್ಚಿನ ಹಬ್ಬ, ಯಾಕಂದ್ರೆ ಈ ವೇಳೆ ಉತ್ತರ ಕರ್ನಾಟಕದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಂಗಳೆಯರಲ್ಲಿ ಸಡಗರ- ಸಂಭ್ರಮ ಮನೆ ಮಾಡಿರುತ್ತೆ, ಇದಕ್ಕೆಲ್ಲಾ ಕಾರಣ ಅಂದ್ರೆ ಅದು ಸಕ್ಕರೆ ಗೊಂಬೆ.
ನನ್ನ ಅಚ್ಚುಮೆಚ್ಚಿನ ಬೆಲ್ಲದಚ್ಚಿನ ಗೊಂಬೆಯೇ, ನೀ ಅತ್ತರೊಂದು ರುಚಿ, ನಕ್ಕರೊಂದು ರುಚಿ.. ಹೀಗಂತಾ ಸಕ್ಕರೆ ಗೊಂಬೆಗಳ ಬಗ್ಗೆ ವರಕವಿ ಡಾ. ದ.ರಾ ಬೇಂದ್ರೆ ವರ್ಣಿಸಿದ್ದಾರೆ.
ಅದರಂತೆ ಈಗ ನಾವು ನೀವೆಲ್ಲ ಗೌರಿ ಹಬ್ಬದ ಹೊಸ್ತಿಲಲ್ಲಿದ್ದೇವೆ ಕೆಲವು ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪಿಸುವ ಗೌರಮ್ಮನ ವಿಗ್ರಹಕ್ಕೆ ಗೌರಿ ಹುಣ್ಣಿಮೆ ರಾತ್ರಿಯಂದು ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವ ಪದ್ಧತಿ ಇದೆ. ಸಕ್ಕರೆ ಗೊಂಬೆಗಳು ಇಲ್ಲದಿದ್ದರೆ ಗೌರಿ ಹುಣ್ಣಿಮೆ ಆಚರಣೆಯೇ ಅಪೂರ್ಣ ಎಂಬ ನಂಬಿಕೆಯೂ ಇದೆ.
ಅನೇಕ ಕುಟುಂಬಗಳು ತಿಂಗಳ ಮೊದಲೇ ಸಕ್ಕರೆ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿ ಮಾರಾಟ ಮಾಡಲು ಅಣಿಯಾಗಿವೆ.
ಅದೇ ರೀತಿ ನವಲಗುಂದ ಪಟ್ಟಣದಲ್ಲಿರುವ ಮುಸ್ಲಿಂ ಕುಟುಂಬ ಹೆಚ್ಚು ಕಡಿಮೆ ಕಳೆದ 50 ವರ್ಷಗಳಿಂದ ಸಕ್ಕರೆ ಗೊಂಬೆ ಮಾಡುವ ಕಾಯಕದಲ್ಲಿ ನಿರತವಾಗಿರುವುದು ಹಿಂದೂ ಮುಸ್ಲಿಂ ಭಾವೈಕ್ಯತೆಗೂ ಸಹ ಸಾಕ್ಷಿಯಾಗಿದ್ದಾರೆ.
ಇನ್ನೂ ಹೊಸದಾಗಿ ಮದುವೆ ನಿಶ್ಚಯಗೊಂಡ ವರನ ಕಡೆಯವರು ವಧುವಿನ ಮನೆಗೆ ಗೌರಿ ಹುಣ್ಣಿಮೆಯಂದು ದಂಡಿಯ ಜೊತೆಗೆ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಬರುವ ಸಂಪ್ರದಾಯವಿದೆ. ಇಷ್ಟೆಲ್ಲಾ ವಿಶೇಷತೆ ಇರುವ ಹಬ್ಬದಕ್ಕೆ ಖಾಜಿ ಕುಟುಂಬದ ಕಾಯಕ ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಹ ಎತ್ತಿ ಹಿಡಿಯುವಂತಿರೋದು ಸಂತಸದ ಸಂಗತಿ...
Kshetra Samachara
29/11/2020 05:02 pm