ಹುಬ್ಬಳ್ಳಿ- ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆಯನ್ನು ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಎಸ್ ನಿಡವಣಿ ಅವರ ಸೇವೆಯನ್ನು ಪರಿಗಣಿಸಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರಿಂದ ಮುಖ್ಯಮಂತ್ರಿ ಪದಕವನ್ನು ಪಡೆದಿದ್ದಾರೆ.
ಆದ ಕಾರಣ ನಗರದ ಗೋಕುಲ ರೋಡನ ರಾಧಾ ಕೃಷ್ಣ ನಗರದಲ್ಲಿರುವ ಅವರ ಸ್ವಗೃಹದಲ್ಲಿ, ಪ್ರಗತಿ ಸೇವಾ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಸಮಾಜ ಸೇವಕರಾದ ಮನೋಜಕುಮಾರ ತೋಟಗೇರ, ಅಧ್ಯಕ್ಷರಾದ ಬಸವರಾಜ ವಾಲಿ ಹಾಗೂ ಗಾಂಧಿನಗರ, ರೇಣುಕಾನಗರ, ಕುಮಾರಪಾರ್ಕ, ರಾಮಲಿಂಗೇಶ್ವರನಗರ ಹಾಗೂ ಆರ್.ಎಮ್.ಲೋಹಿಯಾನಗರದ ನಿವಾಸಿಗಳ ಮುಖಾಂತರ ಅವರನ್ನು ಸನ್ಮಾನಿಸಲಾಯಿತು.....
Kshetra Samachara
23/11/2020 12:41 pm