ಹುಬ್ಬಳ್ಳಿ: ದೀಪಾವಳಿ ಎಂದರೆ ಸಾಕು, ಮನೆಯ ಎಲ್ಲ ಕುಟುಂಬಸ್ಥರು ಸೇರಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಆದರೆ ಇಲ್ಲೊಂದು ಗೆಳೆಯರ ಬಳಗ ಸಂಕಷ್ಟಕ್ಕೆ ಒಳಗಾದ ಮಕ್ಕಳ ಜೊತೆ ಹಬ್ಬವನ್ನು ಆಚರಣೆ ಮಾಡುವುದರ ಮೂಲಕ ಮಾದರಿಯಾಗಿದ್ದಾನೆ...
ಹೀಗೆ ನವನಗರದ ತೆರೆದ ತಂಗುದಾಣ ಕೇಂದ್ರ ಸಂಕಷ್ಟಕ್ಕೆ ಒಳಗಾದ ಮಕ್ಕಳ ಜೊತೆ ಮಕ್ಕಳ ಸಣ್ಣ ಪಟಾಕಿ ಹಾರಿಸುತ್ತ, ಸಿಹಿ ನೀಡಿ ದೀಪಾವಳಿಯನ್ನು ಆಚರಿಸುತ್ತಿರುವ ಇವರು, ಸೋಮನಗೌಡ್ರ ಪಾಟೀಲ್ ಗೆಳೆಯರ ಬಳಗ. ಆರ್ಥಿಕ ಸಂಕಷ್ಟದ ನಡುವೆಯೂ ತನ್ನ ಕುಟುಂಬದ ಜೊತೆ ದೀಪಾವಳಿ ಆಚರಿಸದೇ, ಇತರರ ಹಾಗೆ ಈ ಮಕ್ಕಳು ಸಹ, ದೀಪಾವಳಿಯನ್ನು ಸಂಭ್ರಮಿಸಲಿ ಎಂಬ ಉದ್ದೇಶದಿಂದ, ಈ ಮಕ್ಕಳ ಜೊತೆ ದೀಪ ಬೆಳಗುವ ಮೂಲಕ ವಿಶೇಷವಾಗಿ ಆಚರಿಸಿದರು....
ಅದೇಷ್ಟೋ ದುಡ್ಡು ಇದ್ದರು ಇದ್ದರು ಸಹ, ಖರ್ಚು ಮಾಡಲು ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ, ಸೋಮನಗೌಡ್ರ ಪಾಟೀಲ್ ಗೆಳೆಯರ ಬಳಗ, ಈ ಮಕ್ಕಳು ತಮ್ಮ ಕುಟುಂಬಗಳಿಂದ ದೂರ ಇದ್ದಂತ ಸಂಬಂಧಗಳ ಕೊರತೆ ಮನಸ್ಸಿನಲ್ಲಿ ಉದ್ಭವವಾಗಬಾರದು ಎಂಬ ಉದ್ದೇಶದಿಂದ ಈ ಮಕ್ಕಳ ಮುಖದಲ್ಲಿ ಸಂತಸ ಮೂಡಿಸಿದ್ದಾರೆ...
ಒಟ್ಟಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ತಾವಾಯಿತು ತಮ್ಮ ಕುಟುಂಬ ವಾಯಿತು ಎಂಬುವವರ ನಡುವೆ, ನಿಸ್ವಾರ್ಥ ಸೇವೆ ಮನೋಭಾವನೆ ಇಟ್ಟುಕೊಂಡು ಸಂಕಷ್ಟಕ್ಕೆ ಒಳಪಟ್ಟ ಮಕ್ಕಳ ಜೊತೆ ದೀಪಾವಳಿಯನ್ನು ವಿಶೇಷವಾಗಿ ಸಂಭ್ರಮಿಸಿದ ಸೋಮನಗೌಡ್ರ ಗೆಳೆಯರ ಬಳಗದ ಕಾರ್ಯ ಎಲ್ಲರು ಮೆಚ್ಚುವಂತದ್ದು......
Kshetra Samachara
16/11/2020 12:56 pm