ಧಾರವಾಡ: ರಜೆ ಪಡೆಯದೆ ಕೊರೊನಾ ಸೋಂಕಿತರ ಸೇವೆ ಮಾಡಿದ ಆಯುಷ್ ವೈದ್ಯರೊಬ್ಬರೊಬ್ಬರು ತಮ್ಮ ಮೂರು ತಿಂಗಳ ಎಲ್ಲ ವೇತನದಲ್ಲಿ ಬಡವರಿಗೆ ಉಚಿತವಾಗಿ ಮಾಸ್ಕ್ ದಾನ ಮಾಡಿ ಮಾದರಿಯಾಗಿದ್ದಾರೆ.
ಡಾ.ಮಯೂರೇಶ ಲೋಹಾರ ಅವರು ಮೂರು ತಿಂಗಳ ಹಿಂದೆ ಮೂರೂವರೆ ತಿಂಗಳ ಹಿಂದೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲಿನ ಕೋವಿಡ್ ವಾರ್ಡ್‌ನಲ್ಲಿ ಈವರೆಗೆ ಒಂದೇ ಒಂದು ದಿನ ರಜೆ ಪಡೆಯದೆ ಸೇವೆ ಸಲ್ಲಿಸಿದ್ದಾರೆ.
ಸಾಮಾನ್ಯವಾಗಿ ಕೋವಿಡ್ ವಾರ್ಡ್‌ನಲ್ಲಿ 7 ದಿನ ಸೇವೆ ಸಲ್ಲಿಸಿದ ವೈದ್ಯರಿಗೆ ನಂತರ ಮೂರು ದಿನ ಕ್ವಾರಂಟೈನ್ ಸೌಲಭ್ಯವಿತ್ತು. ಹೀಗಿದ್ದರೂ ಒಂದೇ ಒಂದು ರಜೆ ಪಡೆಯದೆ ಡಾ. ಮಯೂರೇಶ ಸೇವೆ ಸಲ್ಲಿಸಿದ್ದು ಶ್ಲಾಘನೀಯ. ಜೊತೆಗೆ ವೈದ್ಯವೃತ್ತಿಯಿಂದ ಬಂದ ಒಂದೂವರೆ ಲಕ್ಷ ವೇತನದಲ್ಲಿ 10 ಸಾವಿರಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಶಿಕ್ಷಣ ಇಲಾಖೆಗೆ 1,000, ಪೊಲೀಸ್ ಇಲಾಖೆಗೆ 500, ಎರಡು ಅನಾಥಾಶ್ರಮಗಳು ಸೇರಿ ಧಾರವಾಡದ ವಿವಿಧೆಡೆ ಮಾಸ್ಕ್‌ಗಳನ್ನು ತಮ್ಮ ಗೆಳೆಯರ ಸಹಕಾರದಿಂದ ಹಂಚಿದ್ದಾರೆ.
Kshetra Samachara
16/11/2020 10:55 am