ಕಲಘಟಗಿ:ದೀಪಾವಳಿ ಹಬ್ಬಕ್ಕೆ ಸೇವಂತಿ ಹಾಗೂ ಚೆಂಡು ಹೂವು ದುಬಾರಿ ಯಾಗಿದ್ದು,ಗ್ರಾಹಕರಿಗೆ ಹೊರೆಯಾಗಿದೆ. ದೀಪಗಳ ಹಬ್ಬ ದೀಪಾವಳಿಗೆ ಹಾಗೂ ಅಮವಾಸ್ಯೆಗೆ ಹೂ ಹಾಗೂ ಮಾಲೆ ಖರೀದಿಗೆ ಬಂದ ಗ್ರಾಹಕರು ಹೂವಿನ ಬೆಲೆ ಕೇಳಿ ಕಂಗಾಲಾಗಿದ್ದಾರೆ.
ಹುಬ್ಬಳ್ಳಿ,ದಾವಣಗೆರೆಯಿಂದ ಹೂ ತಂದು ಮಾಲೆ ಮಾಡಿ ಮಾರುವ ಹೂವಿನ ವ್ಯಾಪಾರಿಗಳಿಗೂ ಹೂ ದುಬಾರಿಯಾಗಿರುವುದರಿಂದ ಲಾಭ ಕಡಿಮೆ.ಹೂವಿನ ಮಾಲೆಯ ಬೆಲೆ ಸಹ ಹೆಚ್ಚಿಗೆಯಾಗಿದ್ದು ಗ್ರಾಹಕರು ಮಾತ್ರ ಅನಿವಾರ್ಯವಾಗಿ ದುಬಾರಿ ಬೆಲೆ ತೆತ್ತು ಹೂ ಖರೀದಿಗೆ ಮುಂದಾಗಿದ್ದಾರೆ.
Kshetra Samachara
15/11/2020 08:04 pm