ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ
ನವಲಗುಂದ : ದೀಪಾವಳಿ ಹಬ್ಬಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಹಬ್ಬದ ದಿನದಂದು ಎಲ್ಲರ ಮನೆಯಂಗಳಗಳಲ್ಲಿ ಹಣತೆಗಳು ಬೆಳಗಲಿವೆ. ಈ ಹಣತೆಗಳಿಗೆ ಈಗ ಬೇಡಿಕೆ ಕೂಡ ಹೆಚ್ಚಾಗಿದೆ...
ವಿವಿಧ ರೀತಿಯ ಹಣತೆಗಳು ಈಗ ನವಲಗುಂದ ಪಟ್ಟಣಕ್ಕೆ ಲಗ್ಗೆ ಇಟ್ಟಿವೆ. ಗೊಂಬೆ ದೀಪ, ಮಣ್ಣಿನ ಸ್ಟ್ಯಾಂಡ್ ದೀಪ ಹೀಗೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಈಗ ಲಭ್ಯವಿದ್ದು, ಇದರ ಹಿಂದಿನ ಶ್ರಮ ಮಾತ್ರ ಕುಂಬಾರರದ್ದು, ದೀಪಾವಳಿಗೆ ಪ್ರತಿ ಮನೆಯು ಹೊಳೆಯುತ್ತೆ ಅಂದ್ರೆ ಅದಕ್ಕೆ ಪ್ರಮುಖ ಕಾರಣ ಕುಂಬಾರ ಮಾಡಿದ ಮಣ್ಣಿನ ದೀಪ, ದೀಪಾವಳಿಗೂ ಎರಡು ತಿಂಗಳ ಮುನ್ನವೇ ದೀಪಗಳ ತಯಾರಿಗೆ ಸಿದ್ಧತೆ ಮಾಡಿಕೊಳ್ಳುವ ಇವರು ನಮ್ಮ ಮನೆ ಬೆಳಗುವುದರಲ್ಲಿ ಮುಖ್ಯ ಪಾತ್ರವನ್ನ ವಹಿಸುತ್ತಾರೆ. ಅಷ್ಟೇ ಅಲ್ಲದೆ ತಾವೇ ತಯಾರಿಸಿ ಮಾರುಕಟ್ಟೆಯಲ್ಲಿ ತಾವೇ ಮಾರಾಟ ಮಾಡುತ್ತಾರೆ. ಇನ್ನೂ ಈ ಬಾರಿ ಕೋವಿಡ್ ಹಾವಳಿ ಇದ್ದರು ಸಹ ದೀಪಾವಳಿ ಕುಂಬಾರರ ಕೈ ಹಿಡಿದಿದೆ. ಈ ಬಗ್ಗೆ ತಯಾರಕರೊಬ್ಬರೂ ಮಾತನಾಡಿದ್ದು ಹೀಗೆ...
ಇನ್ನೂ ಈ ವರ್ಷ ಎಲ್ಲಾ ಹಬ್ಬ ಹರಿದಿನಗಳಿಗೂ ಬೇತಾಳಂನಂತೆ ಕಾಡುತ್ತಿರುವ ಕೊರೋನಾ ಮಾಹಾಮಾರಿ, ದೀಪಾವಳಿಗೂ ಬೆಂಬಿಡದೆ ಕಾಡುತ್ತಿದ್ದರು ಸಹ ವ್ಯಾಪಾರಿಗಳಿಗೆ ಈ ಬಾರಿ ಅಷ್ಟೇನೂ ಸಮಸ್ಯೆ ಆಗಿಲ್ಲಾ, ತಾವು ಮಾಡಿದ ದೀಪಗಳಿಗೆ ಒಳ್ಳೆಯ ಬೇಡಿಕೆ ಇದೆ ಎಂದು ವ್ಯಾಪಾರಸ್ಥರು ಪಬ್ಲಿಕ್ ನೆಕ್ಸ್ಟ್ ಎದುರು ಸಂತಸವನ್ನು ಹಂಚಿಕೊಂಡರು.
Kshetra Samachara
12/11/2020 06:41 pm