ಧಾರವಾಡ: ಹಣದ ಹಿಂದೆ ಬೆನ್ನು ಹತ್ತಿರುವ ಮನುಷ್ಯ ಮಾನವೀಯತೆಯನ್ನೇ ಮರೆತಿದ್ದಾನೆ ಎಂಬ ಮಾತುಗಳು ಇದೀಗ ಸಹಜವಾಗಿ ಕೇಳಿ ಬರುತ್ತವೆ. ಆದರೆ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ ನೋಡಿ.
ಧಾರವಾಡದ ದೀಪಿಕಾ ಬಾಡಗಿ ಎಂಬ ಬಾಲಕಿ ಪ್ರತಿನಿತ್ಯ ಹೊರಗಡೆ ಹೊರಟರೆ ಸ್ಕೂಟಿಯಲ್ಲಿ ಹಾಲು, ಬೆಸ್ಕೆಟ್ ಇಟ್ಟುಕೊಂಡು ಹೋಗ್ತಾಳಂತೆ. ಮಾನವೀಯತೆಗೂ ಈ ರೀತಿ ಹಾಲು, ಬಿಸ್ಕೆಟ್ ಇಟ್ಟುಕೊಂಡು ಹೋಗುವುದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಬೇಡಿ. ಒಂದಕ್ಕೊಂದು ಸಂಬಂಧ ಇದೆ.
ಈ ಬಾಲಕಿ ತನ್ನ ತಾಯಿ ಜೊತೆ ಸ್ಕೂಟಿಯಲ್ಲಿ ಹೊರಟರೆ ಸಾಕು ಹಾಲು, ಬಿಸ್ಕೆಟ್ ಇಟ್ಟುಕೊಂಡು ಹೋಗಿ ಬೀದಿ ನಾಯಿಗಳಿಗೆ ಹಾಕುತ್ತಾಳಂತೆ. ಹಲವು ದಿನಗಳಿಂದ ಆಕಾಶವಾಣಿ ಕೇಂದ್ರದ ಬಳಿ ಇದ್ದ ಒಂದು ಬೀದಿ ನಾಯಿಗೆ ಇವರು ಹಾಲು, ಬಿಸ್ಕೆಟ್ ನೀಡಿದ್ದರು. ಆದರೆ, ಎರಡ್ಮೂರು ದಿನಗಳಿಂದ ಆ ನಾಯಿ ಮಲಗಿದ ಜಾಗದಲ್ಲೇ ಮಲಗಿ ಎದ್ದು ನಿಲ್ಲಲೂ ಆಗದೇ ಪರದಾಡುತ್ತಿದುದನ್ನು ಕಂಡ ದೀಪಿಕಾ ಆ ನಾಯಿಗೆ ಹಾಲು, ಬಿಸ್ಕೆಟ್ ನೀಡಿ ಆರೈಕೆ ಮಾಡುತ್ತಿದ್ದಾಳೆ. ಕೆಲ ದಿನಗಳಿಂದ ಆ ನಾಯಿ ಅಲ್ಲೇ ಮಲಗಿದ್ದು, ಪ್ರತಿನಿತ್ಯ ದೀಪಿಕಾ ಅದು ಇದ್ದ ಜಾಗದಲ್ಲೇ ಬಂದು ಅದಕ್ಕೆ ಆಹಾರ ನೀಡಿ ಆರೈಕೆ ಮಾಡುತ್ತಿದ್ದಾಳೆ.
ಒಡಹುಟ್ಟಿದವರೇ ದಾಯಾದಿಗಳಾಗುವ ಈ ಕಾಲದಲ್ಲಿ ಬೀದಿ ನಾಯಿಗೂ ಇಷ್ಟೊಂದು ಪ್ರೀತಿ ತೋರಿಸುತ್ತಿರುವ ದೀಪಿಕಾ ಅವಳ ಕೆಲಸಕ್ಕೆ ನಾವೂ ಒಂದು ಮೆಚ್ಚುಗೆ ವ್ಯಕ್ತಪಡಿಸಲೇಬೇಕಲ್ಲವೇ?
Kshetra Samachara
02/11/2020 07:14 pm