ಹುಬ್ಬಳ್ಳಿ: ಕೊರೋನಾ ವೈರಸ್ ಭಯವನ್ನು ಬದಿಗಿಟ್ಟು ದಸರಾ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಸದುದ್ದೇಶದಿಂದ ಶ್ರೀ ಸದ್ಗುರು ಚೆಸ್ ಮಾರ್ಟ್ ಆ್ಯಂಡ್ ಮ್ಯೂಸಿಕ್ ಅಕಾಡೆಮಿ ವತಿಯಿಂದ ಪಬ್ಲಿಕ್ ನೆಕ್ಸ್ಟ್ ಸಹಭಾಗಿತ್ವದಲ್ಲಿ ಚೆಸ್ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಭಾಗವಹಿಸಿ ವಿಜೇತರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು 24ರಂದು ಬಿಡುಗಡೆಗೊಳಿಸಲಿದೆ.
ಆನ್ ಲೈನ್ ಮೂಲಕ ನಡೆದ ಚೆಸ್ ಪಂದ್ಯದಲ್ಲಿ ಒಟ್ಟು ಏಳು ರೌಂಡ್ ಆಯೋಜಿಸಲಾಗಿತ್ತು.ಇದರಲ್ಲಿ 116 ಜನರು ಭಾಗವಹಿಸಿದ್ದರು.
ಸಾಮಾಜಿಕ ಅಂತರ ಕಾಯ್ದುಕೊಂಡು ದಸರಾ ಹಬ್ಬವನ್ನು ಆರೋಗ್ಯಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಚೆಸ್ ಪಂದ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ARCHANA NAIK
Director(SCMA)
8762191789
8431737265
9380671947
Kshetra Samachara
23/10/2020 05:41 pm