ಹುಬ್ಬಳ್ಳಿ:- ಸ್ವಚ್ಛತಾ ಬಗ್ಗೆ ಸ್ಥಳೀಯ ನಾಯಕರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರೆಗೂ ಪೊರಕೆ ಹೊಡಿದು ಕಸ ಗುಡಿಸಿ ಸ್ವಚ್ಚತ ನಗರ ಹಾಗೂ ಹಳ್ಳಿ ಬಗ್ಗೆ ಜಾಗೃತಿ ಮೂಡಿಸಿದ್ದಾಯಿತು.
ಆದರೆ ಇವರೆಲ್ಲರಿಗಿಂತಲೂ ಒಬ್ಬ ವ್ಯಕ್ತಿ ಯಾವುದೇ ಲಾಭದ ಅಪೇಕ್ಷೆ ಪಡದೆ ಸ್ವತಃ ತಾನೇ ಖುದ್ದಾಗಿ ರಸ್ತೆ ಪಕ್ಕದಲ್ಲಿರುವ ಕಸವನ್ನು ತೆಗೆದು ಹಸಿ ಕಸ ಒಣ ಕಸ ಬೇರೆ ಮಾಡಿ ಸುಡುತ್ತಿದ್ದಾನೆ ಅಷ್ಟಕ್ಕೂ ಆತ ಯಾರು ಅನ್ನೋದನ್ನಾ ತೋರಿಸ್ತೀವಿ ನೋಡಿ.
ಹೀಗೆ ಕಸವನ್ನು ಒಂದು ಕಡೆ ಸೇರಿಸುತ್ತಿರುವ ಈತನ ಹೆಸರು ಕುಮಾರ್ ಅಂತ ಮೂಲತಃ ಬೆಂಗಳೂರು ನಿವಾಸಿ' ನೋಡಲು ಭಿಕ್ಷುಕನ ತರಹ ಕಾಣುತ್ತಿದ್ದು ಇವರ ಕಾಯಕ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.
ಮನೆ ಕಸವನ್ನು ಗೂಡಿಸಲು ಹಿಂದೆ ಮುಂದೆ ನೋಡುವ ಜಾಣ ಜನರ ಮಧ್ಯೆ ಯಾವದೋ ಒಂದು ಕಾರಣಕ್ಕಾಗಿ ಕುಟುಂಬ ಕಲಹದ ಕಾರಣ ಮನೆ ಬಿಟ್ಟು ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ.
ಈತ ರಸ್ತೆ ಮಧ್ಯದಲ್ಲಿರುವ ಹಸಿ ಕಸ, ಒಣ ಕಸ ಬೇರೆ ಮಾಡಿ ಸುಡುತ್ತಿದ್ದಾರೆ.
ಬೆಳಿಗ್ಗೆಯಿಂದ ರಸ್ತೆ ಪಕ್ಕದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್ ಹಾಗೂ ಗಾಜಿನ ಬಾಟಲ್ ಗಳನ್ನು ಆಯ್ದು ಕೊಂಡು' ಒಂದೆಡೇ ಸೇರಿಸ ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾರೆ....!ಈತನ ಕಾರ್ಯ ನೋಡಿದ ಗ್ರಾಮಸ್ಥರು ಮೆಚ್ಚುಗೆ ಜೊತೆಗೆ ಅಚ್ಚರಿ ವ್ಯಕ್ತ ಪಡಿಸಿದ್ದಾರೆ...
ಒಟ್ಟಿನಲ್ಲಿ ತಮ್ಮ ಮನೆ ಸ್ವಚ್ಚ ಮಾಡೋಕೆ ಹಿಂದೆ ನೋಡುವವರ ನಡುವೆ ಯಾವುದೇ ಉದ್ದೇಶವಿಲ್ಲದೇ ರಸ್ತೆ ಪಕ್ಕದಲ್ಲಿರುವ ಕಸವನ್ನು ವಿಲೇವಾರಿ ಮಾಡುತ್ತಿರುವ ಕುಮಾರನ್ ಕಾರ್ಯಕ್ಕೇ ಸಲಾಂ ಹೇಳಲೇಬೇಕು......!
Kshetra Samachara
17/10/2020 09:05 pm