ಧಾರವಾಡ: ಇವತ್ತ ಮುಂಜೇಲರ ಈ ನಾಯಿ ಹಿಂಡಿನ ಸಲುವಾಗಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಒಂದು ಸುದ್ದಿ ಮಾಡಿತ್ತು. ಆ ವರದಿ ನೋಡಿ ಇವತ್ತ ಮಹಾನಗರ ಪಾಲಿಕೆಯವರು ಧಾರವಾಡದ ಶ್ರೀರಾಮನಗರದಾಗ ಇದ್ದ ಬೀದಿ ನಾಯಿಗಳನ್ನ ಸಂತಾನ ಹರಣ ಚಿಕಿತ್ಸೆ ಮಾಡಾಕ ತುಗೊಂಡ ಹೋಗ್ಯಾರ ನೋಡ್ರಿ.
ಶ್ರೀರಾಮನಗರದಾಗ ಹಿಂಡ ಹಿಂಡ ನಾಯಿಗೋಳು ಬೌ ಬೌ ಅಂತ ಒದರಕೋಂತ ಆತಂಕ ಸೃಷ್ಟಿ ಮಾಡಿದ್ದು. ಇದರಿಂದ ಅಲ್ಲಿನ ಜನ ತಮ್ಮ ಮಕ್ಕಳನ್ನೂ ಹೊರಗ ಬಿಡಾಕ ಹೆದರಾಕತ್ತಿದ್ರು. ಈ ಸಂಬಂಧ ನಾವೊಂದು ಸುದ್ದಿ ಮಾಡಿದ್ವಿ. ಮಧ್ಯಾಹ್ನ ಅನ್ನೋದ್ರೊಳಗ ಪಾಲಿಕೆಯವರು ಆ ನಾಯಿಗಳನ್ನ ಹಿಡಕೊಂಡು ಸಂತಾನಹರಣ ಚಿಕಿತ್ಸೆ ಮಾಡಾಕ ತುಗೊಂಡು ಹೋಗಿ ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಟ್ಟಾರ ನೋಡ್ರಿ ಪಾ.
Kshetra Samachara
16/10/2020 10:05 pm