ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಅಣ್ಣಿಗೇರಿ : ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೇನೂ ಬರವಿಲ್ಲ ಬಿಡಿ ಪ್ರತಿಯೊಂದು ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಸೃಷ್ಟಿಸುವ ಕಲಾವಿದರಿದ್ದಾರೆ ಅವರ ಸಾಲಿನಲ್ಲಿ ಇಲ್ಲೊಬ್ಬ ಕಲಾವಿದ ತನ್ನ ಏಕಪಾತ್ರಾಭಿನಯದ ಹಾಗೂ ಮಿಮಿಕ್ರೀ, ಡೈಲಾಗ್ ಕಲೆಯಿಂದಲೇ ಧಾರವಾಡ ಜಿಲ್ಲೆಯಲ್ಲಿ ಹೆಸರು ಮಾಡಿದ್ದಾನೆ.
ಈತನ ಹೆಸರು ಪ್ರತೀಕ ಕುಂದಗೋಳ ಮೂಲತ: ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದ ಬಿ.ಕಾಮ್ ವಿದ್ಯಾರ್ಥಿ ಯಾಗಿರುವ ಈ ಯುವಕ ಸತತ ಆರು ವರ್ಷದಿಂದ ತನ್ನ ಏಕಪಾತ್ರಾಭಿನಯ, ಮಿಮಿಕ್ರಿ, ಡೈಲಾಗ್ ಕಲೆ ಮೂಲಕ ಪ್ರತಿಯೊಂದು ಸಭೆ ಸಮಾರಂಭದ ಸ್ಟೇಜ್ ಮೇಲೆ ಸಂಗೊಳ್ಳಿ ರಾಯಣ್ಣ, ಹಿರಣ್ಯ ಕಶ್ಯಪು, ಅರ್ಜುನ, ರಾವಣನ ಏಕಾಪಾತ್ರಭಿನಯದ ತೋರಿ ನೋಡುಗರ ಎದೆಯಲ್ಲಿ ರೋಮಾಂಚನ ಸೃಷ್ಟಿಸಿದ್ದು ಕನ್ನಡದ ಮೇರು ನಟರಾದ ಯಶ್, ಸುದೀಪ್, ದರ್ಶನ, ಖಳನಟ ರವಿಶಂಕರ್ ಧ್ವನಿಗಳನ್ನ ಅನುಕರಣೆ ಮಾಡಿ ಪ್ರೇಕ್ಷಕರನ್ನು ರಂಜಿಸಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಸಖತ್ ಡೈಲಾಗ್ ಕೂಡಾ ಹೊಡಿತಾರೇ.
ಪ್ರತಿ ವರ್ಷಕ್ಕೆ 50 ರಿಂದ 60 ದಿನಗಳವರೆಗೆ ಕಾರ್ಯಕ್ರಮ ನೀಡುವ ಈ ಯುವಕ ಸತತ ಮೂರು ಬಾರಿ ತನ್ನ ಏಕಪಾತ್ರಾಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದ ಕಲಾವಿದ ಇದಷ್ಟಲ್ಲದೆ ಕಿರುಚಿತ್ರ ನಿರ್ಮಾಣ, ರ‍್ಯಾಪ್ ಸಾಂಗ್ ತಯಾರಿಯಲ್ಲೂ ಸೈ ಎನಿಸಿಕೊಂಡಿರುವ ಈತ ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡಿಗರ ಕುರಿತಂತೆ ರ‍್ಯಾಪ್ ಸಾಂಗ್ ತಯಾರಿಯಲ್ಲಿ ತೊಡಗಿದ್ದು ಚಂದನವನದ ಹೊಸಬರ ಚಿತ್ರ "ಚೋಟಾ ಬಾಂಬೆ" ಚಿತ್ರಕ್ಕೂ ಬಣ್ಣ ಹಚ್ಚಿ ಹಿರಿತೆರೆಗೂಕಾಲಿಡಲು ಹವಣಿಸುತ್ತಿರುವ ಉದಯೋನ್ಮುಖ ಪ್ರತಿಭೆ ಪಡೆದ ಪ್ರಶಸ್ತಿ ಪುರಸ್ಕಾರಕ್ಕೆ ಲೆಕ್ಕವಿಲ್ಲ ಬಿಡಿ.
Kshetra Samachara
16/10/2020 09:43 pm