ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪರಿಸರ ಸ್ನೇಹಿ ಪೊಲೀಸ್ ಠಾಣೆ: ಉದ್ಯಾನವನವಾಗಿದೆ ಅಣ್ಣಿಗೇರಿ ಠಾಣೆ

ಹುಬ್ಬಳ್ಳಿ: ಆರಕ್ಷಕ ಠಾಣೆ ಅಂದ್ರೇ ಎಲ್ಲರಿಗೂ ಎಲ್ಲಿಲ್ಲದ ಆತಂಕ ಎಲ್ಲೋ ಒಂದು ತರಹದ ಭಯ ಇದ್ದೇ ಇರುತ್ತದೆ. ಆದರೇ ಇಲ್ಲೊಂದು ಪೊಲೀಸ್ ಠಾಣೆ ಮಾತ್ರ ಜನಸ್ನೇಹಿ ಜೊತೆಗೆ ಪರಿಸರ ಸ್ನೇಹಿಯಾಗಿದೆ.ಯಾವುದು ಆ ಪೊಲೀಸ್ ಠಾಣೆ ಅಂತೀರಾ ಈ ಸ್ಟೋರಿ ನೋಡಿ....

ಎಲ್ಲೆಡೆಯೂ ಹೂವಿನ ಕಂಪು, ಹಚ್ಚು ಹಸುರಿನ ಹೊದಕೆ, ಸ್ವಚ್ಛಂದ ಪರಿಸರದಲ್ಲಿ ನಿಚ್ಚಳವಾಗಿ ಕಾಣುತ್ತಿರುವ ಪೊಲೀಸ್ ಠಾಣೆಯೇ ಅಣ್ಣಿಗೇರಿ ಪೊಲೀಸ್ ಠಾಣೆ. ಹೌದು...ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆ ನಿಜಕ್ಕೂ ಒಂದು ಉದ್ಯಾನವನ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಈ ಪೊಲೀಸ್ ಠಾಣೆ ಗ್ರಾಮಸ್ಥರ ಹಾಗೂ ಪೊಲೀಸ್ ಸಿಬ್ಬಂದಿಗಳ ಕಾರ್ಯದಿಂದ ಈಗ ಪರಿಸರ ಸ್ನೇಹಿ ಪೊಲೀಸ್ ಠಾಣೆಯಾಗಿ ಮಿಂಚುತ್ತಿದೆ.

ಹತ್ತು ಹಲವಾರು ಬಗೆಯ ಹೂವುಗಳು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಸಾಕ್ಷಿಯಾಗಿರುವ ಅಣ್ಣಿಗೇರಿ ಪೊಲೀಸ್ ಠಾಣೆ ಪಿಎಸ್ಐ ಎಲ್‌.ಕೆ.ಜುಲಕಟ್ಟಿಯವರ ನೇತೃತ್ವದಲ್ಲಿ ಇಂತಹದೊಂದು ಮಹತ್ವದ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.

ಅಣ್ಣಿಗೇರಿ ತಾಲೂಕಿನ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಂದಿರುವ ಎಲ್.ಕೆ.ಜುಲಕಟ್ಟಿ ತಮ್ಮ ಪೊಲೀಸ್ ಠಾಣೆಯ ಸುತ್ತಲೂ ನಿಸರ್ಗಮಯವಾದ ಸೌಂದರ್ಯ ದತ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ಠಾಣೆಯ ಸುತ್ತಲೂ ಉದ್ಯಾನವನ ನಿರ್ಮಾಣ ಮಾಡಿಸುವ ಮೂಲಕ ಠಾಣೆಗೆ ಬರುವ ಜನಸಾಮಾನ್ಯರಿಗೆ ಅನುಕೂಲವಾಗುವ ದೃಷ್ಠಿಯಿಂದ ತಾಲೂಕಿನ ಎಲ್ಲ ಜನರನ್ನೂ ಹಾಗೂ ಠಾಣೆಯ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ.

Edited By :
Kshetra Samachara

Kshetra Samachara

15/10/2020 07:17 pm

Cinque Terre

12.2 K

Cinque Terre

0

ಸಂಬಂಧಿತ ಸುದ್ದಿ