ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ತೋಡಾ ದಿಲ್, ತೋಡಾ ಹಾರ್ಟ್ ಧ್ಯೇಯ ವಾಕ್ಯದೊಂದಿಗೆ ಎಸ್ ಡಿಎಂ ನಾರಾಯಣ ಹೃದಯಾಲಯ ಆಸ್ಪತ್ರೆ ಮತ್ತು ಪಬ್ಲಿಕ್ ನೆಕ್ಸ್ಟ್ ಸಂಯೋಗದಿಂದ ಆರೋಗ್ಯ ಪೂರ್ಣ ಜೀವನಕ್ಕೆ ನಮ್ಮ ಹೃದಯದ ಆರೋಗ್ಯ, ಕಾಳಜಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಈ ದಿನದಂದು ಆರೋಗ್ಯವೇ ಅರಮನೆ, ಅನಾರೋಗ್ಯವೇ ಸೆರೆಮನೆ ಎಲ್ಲರೂ ಆರೋಗ್ಯದಿಂದಿರೋಣ ಎಂದು ಡಾ.ವಿವೇಕಾನಂದ ಗಜಪತಿ ಎಮ್.ಡಿ ( ಇಂಟರ್ ನಲ್ ಮೆಡಿಸಿನ್ ) ಡಿಎಮ್ -ಕಾರ್ಡಿಯಾಲಜಿ ಹಿರಿಯ ಹೃದಯ ರೋಗ ತಜ್ಞರು ಹೇಳಿದ್ದಾರೆ.
ಉತ್ತಮ ಆರೋಗ್ಯಕ್ಕೆ ಇವರ ಸಲಹೆ ಹೀಗಿದೆ ನೋಡಿ
ದಿನಕ್ಕೆ 30 ನಿಮಿಷ ವಾಕಿಂಗ್ ಇಲ್ಲವಾದಲ್ಲಿ ವಾರಕ್ಕೆ 5 ದಿನ ವ್ಯಾಯಾಮ ಅಗತ್ಯ, ಎಣ್ಣೆ ಪದಾರ್ಥ ಸೇವನೆ ಹತೋಟಿ, ನಿಯಮಿತ ಆರೋಗ್ಯ ತಪಾಸಣೆಯಿಂದ ಹೃದಯ ರೋಗಗಳನ್ನು ತಡೆಯಬಹುದು ಎಂದಿದ್ದಾರೆ.
ವೈದ್ಯರ ಸಲಹೆ ಪಾಲಿಸಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/09/2022 12:38 pm