ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಸಹಯೋಗದೊಂದಿಗೆ ಪಾಲಿಕೆ ಸದಸ್ಯ ಎಂ.ಎಂ.ಭದ್ರಾಪೂರ ನೇತೃತ್ವದಲ್ಲಿಂದು ಹುಬ್ಬಳ್ಳಿಯ ಆನಂದನಗರ ರಸ್ತೆಯಲ್ಲಿರುವ ಹೂಬಳ್ಳಿ ಶಾದಿ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಬ್ಲಿಕ್ ನೆಕ್ಸ್ಟ್ ಹೆಲ್ತ್ ಕ್ಯಾಂಪ್ ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಆರಂಭಗೊಂಡಿತು.
ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಪಬ್ಲಿಕ್ ನೆಕ್ಸ್ಟ್ ಸಾಮಾಜಿಕ ಕಾರ್ಯದಲ್ಲಿ ಕೂಡ ಸಾಕಷ್ಟು ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ಎಂ.ಎಂ.ಭದ್ರಾಪೂರ ನೇತೃತ್ವದಲ್ಲಿ ಹಲವಾರು ವೈದ್ಯಕೀಯ ತಪಾಸಣೆಗಳು ನಡೆಯುತ್ತಿದ್ದು, ಸಾರ್ವಜನಿಕರು ತಂಡೋಪ ತಂಡವಾಗಿ ಹೆಲ್ತ್ ಕ್ಯಾಂಪಿಗೆ ಆಗಮಿಸುತ್ತಿದ್ದಾರೆ. ಈಗಾಗಲೇ ನೂರಾರು ಜನರು ಆಗಮಿಸಿದ್ದು, ವಿಶೇಷ ವೈದ್ಯಕೀಯ ತಪಾಸಣೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಜವಾಬ್ದಾರಿಯ ಜೊತೆಗೆ ಇಂತಹದೊಂದು ಸಾಮಾಜಿಕ ಕಾರ್ಯ ಮಾಡುತ್ತಿದ್ದು, ಈ ಕಾರ್ಯಕ್ಕೆ ಪಾಲಿಕೆ ಸದಸ್ಯ ಎಂ.ಎಂ.ಭದ್ರಾಪೂರ ಅವರು ಬೆಂಬಲ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/08/2022 12:30 pm