ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ನಿಮ್ಮ ಪಬ್ಲಿಕ್ ನೆಕ್ಸ್ಟ್ ಈಗ ಉಚಿತ ಆರೋಗ್ಯ ಶಿಬಿರದ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಲು ಮುಂದಾಗಿದೆ. ವಾರ್ಡ್ ನಂ.53ರ ಮಹಾನಗರ ಪಾಲಿಕೆ ಸದಸ್ಯ ಎಂ.ಎಂ ಭದ್ರಾಪುರ ಅವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.

ಹೃದಯ ರೋಗ ತಜ್ಞರು, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞ ವೈದ್ಯರು,‌ ಹಾಗೂ ನುರಿತ ವೈದ್ಯರಿಂದ ಉಚಿತ ಸಮಾಲೋಚನೆ. ಇದರೊಂದಿಗೆ ಉಚಿತ ನೇತ್ರ, ಶ್ರವಣ ತಪಾಸಣೆ ಶಿಬಿರ.

ಬ್ಲಡ್ ಶುಗರ್, ರಕ್ತದೊತ್ತಡ ಹಾಗೂ ರಕ್ತ ತಪಾಸಣೆ, ಇಸಿಜಿ

ಈ ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು ಎರಡುವರೆ ಸಾವಿರದಿಂದ ಮೂರು ಸಾವಿರದವರೆಗಿನ ವೆಚ್ಚದ ಎಲ್ಲ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು.

ಈ ಶಿಬಿರದಲ್ಲಿ ಎಲ್ಲ ವಯೋಮಾನದವರ ಆರೋಗ್ಯ ತಪಾಸಣೆಗೆ ಮುಕ್ತ ಅವಕಾಶವಿದೆ.

ಬನ್ನಿ, ನುರಿತ ವೈದ್ಯರಿಂದ ನಿಮ್ಮ ಆರೋಗ್ಯ ಪರೀಕ್ಷಿಸಿ, ಸಲಹೆ ಮಾರ್ಗದರ್ಶನ ಪಡೆಯಿರಿ.

ಇದೇ ಆಗಸ್ಟ್ 14 ಭಾನುವಾರದಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2:00 ವರೆಗೆ ನಡೆಯಲಿದೆ‌.

ಸ್ಥಳ- ಹೂಬಳ್ಳಿ ಶಾದಿಮಹಲ್, ಫತೇಶಾ ವಲಿ ನಗರ, ಆನಂದನಗರ ರೋಡ್, ಮೂರನೇ ಅಡ್ಡ ರಸ್ತೆ ಹುಬ್ಬಳ್ಳಿ

ಅವಳಿ ನಗರ ಜನಾರೋಗ್ಯವೇ ಪಬ್ಲಿಕ್ ನೆಕ್ಸ್ಟ್ ಆಶಯ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9972157058, 8867722291, 8722646108

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/08/2022 08:47 pm

Cinque Terre

154.21 K

Cinque Terre

5

ಸಂಬಂಧಿತ ಸುದ್ದಿ