ಕುಂದಗೋಳ : ಸರ್ಕಾರಿ ಆಸ್ಪತ್ರೆ ಅರಸಿ ಬರುವ ರೋಗಿಗಳು, ಗರ್ಭಿಣಿಯರು ಹಾಗೂ ಹೊರರೋಗಿಗಳನ್ನು ನಿಭಾಯಿಸಲು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸ ಪಡಬೇಕಾದ ಸ್ಥಿತಿ ಇಂದು ನಿರ್ಮಾಣವಾಗಿದೆ.
ಹೌದು... ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು, ವಾರ್ಷಿಕ ಮೌಲ್ಯಮಾಪನ ಪದ್ಧತಿ, ಸಮಾನ ವೇತನ ಹಾಗೂ ಸೇವಾ ಭದ್ರತೆ, ಹೊರಗುತ್ತಿಗೆ ನೌಕರರಿಗೆ ಸರ್ಕಾರದ ಸಂಸ್ಥೆ ರಚನೆ ಸೇರಿದಂತೆ ವಿವಿಧ ಬೇಡಿಕೆ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯದ ಹೊರಗುತ್ತಿಗೆ ನೌಕರರ ಸಂಘ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ಕೈಗೊಂಡಿರುವ ಧರಣಿಗೆ ಬೆಂಬಲ ನೀಡಲು ಹೋಗಿದ್ದಾರೆ.
ಈ ಕಾರಣ ರೋಗಿಗಳ ರಕ್ತ ಪರೀಕ್ಷೆ, ಕೋವಿಡ್ ಪರೀಕ್ಷೆ, ಬಿಪಿ- ಶುಗರ್ ಸೇರಿದಂತೆ ಇತರ ಅವಶ್ಯಕ ಕೆಲಸಗಳಿಗೆ ಆಸ್ಪತ್ರೆ ಸಿಬ್ಬಂದಿಯೇ ಅತ್ತಿಂದಿತ್ತ ಓಡಾಡುವ ಕೆಲಸದೊತ್ತಡಕ್ಕೆ ಸಿಲುಕಿದ್ದಾರೆ.
ವರದಿ: ಶ್ರೀಧರ ಪೂಜಾರ
Kshetra Samachara
07/07/2022 03:37 pm