ಹುಬ್ಬಳ್ಳಿ : ಸ್ವಾತಂತ್ರ್ಯ ಹೋರಾಟಗಾರರಾದ ಭಗತಸಿಂಗ್, ರಾಜಗುರು, ಸುಖದೇವ ಅವರ ಹುತಾತ್ಮ ದಿನ ಇಂದು. ಈ ದಿನದ ಅಂಗವಾಗಿ, ಇಂದು ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ನಗರದ ರಾಷ್ಟ್ರೋತ್ಥಾನ ಕೇಂದ್ರ ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ನೂರಾರು ಜನ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಶಾಲ ಜಾಧವ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪ್ರಶಾಂತ ಜಾಧವ, ರಂಗನಾಯಕ ತಪೇಲಾ ಉಪಸ್ಥಿತರಿದ್ದರು.
Kshetra Samachara
23/03/2022 09:23 pm